ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವ ಸಾಧ್ಯತೆ !!?

ರಾಜ್ಯದ ಲೋಕಸಭಾ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ದೆಹಲಿಯಲ್ಲಿ ಪಕ್ಷದ ರಾಜ್ಯ ನಾಯಕರು ಸಾಮಾಜಿಕ ನ್ಯಾಯದ ಆಧಾರದಲ್ಲಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ದಪಡಿಸುವ ಕಸರತ್ತು ನಡೆಸಿದ್ದು, ಶುಕ್ರವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಚರ್ಚಿಸಿ, ಪಟ್ಟಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಶುಕ್ರವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿನ ಸಭೆಗೂ ಮುನ್ನ ಕಾಂಗ್ರೆಸ್ ಪಾಲಿನ ಇಪ್ಪತ್ತು ಅಭ್ಯರ್ಥಿಗಳಲ್ಲಿ ಹಾಲಿ ಸಂಸದರ ಕ್ಷೇತ್ರಗಳನ್ನು ಹೊರತುಪಡಿಸಿ, ಜಾತಿ ಲೆಕ್ಕಾಚಾರದಲ್ಲಿ ಯಾವ ಕ್ಷೇತ್ರದಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಹಿಂದುಳಿದ ವರ್ಗ, ಲಿಂಗಾಯತರು ಹಾಗೂ ಅಲ್ಪಸಂಖ್ಯಾತರ ಸಮುದಾಯದವರ ನಡುವೆ ಪೈಪೋಟಿ ಹೆಚ್ಚಿರುವುದರಿಂದ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಕ್ಷೇತ್ರಗಳ ಲೆಕ್ಕಾಚಾರ ಹಾಕಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ದಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ಅಧಿಕೃತ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ

 

ನಿನ್ನೆ ದೆಹಲಿಯಲ್ಲಿ ಪಕ್ಷದ ವರಿಷ್ಠರಾದ ವೇಣುಗೋಪಾಲ್,ಸಿದ್ಧರಾಮಯ್ಯ ಹಾಗೂ ದಿನೇಶ್ ಗುಂಡುರಾವ್ ನೇತೃತ್ವದಲ್ಲಿ ಸಭೆ ಸೇರಿದ್ದು ಇಂದು ಸಂಜೆಯ ಒಳಗೆ ಅಭ್ಯರ್ಥಿಗಳ ಘೋಷಣೆಯಾಗಗುದು.ದ.ಕ ಜಿಲ್ಲೆಯ ಸ್ಥಳೀಯ ಮಟ್ಟದ ನಾಯಕರು ಈ ಸಭೆಯಲ್ಲಿ ಉಪಸ್ಥಿತರಿದ್ದರು.ಎಲ್ಲಾ ನಾಯಕರಿಗೂ ಸ್ಪರ್ಥಿಸುವ ಸಾಮರ್ಥ್ಯವಿದ್ದು ಟಿಕೆಟ್ ಕೇವಲ ಒಬ್ಬರಿಗೆ ನೀಡಲೂ ಅವಕಾಶವಿದ್ದು ಯಾರೋಬ್ಬರಿಗೂ ಟಿಕೆಟ್ ನೀಡಿದರು ಎಲ್ಲರೂ ಪಕ್ಷಕ್ಕಾಗಿ ಒಗ್ಗಟ್ಟಾಗಬೇಕೆಂದು ಹೇಳಲಾಗಿದೆ.ಹಾಗೂ ಇನ್ನು ಬೇರೆ ಬೇರೆ ಹಂತದಲ್ಲಿ ಉಳಿದ ನಾಯಕರಿಗೆ ಪಕ್ಷದಿಂದ ಅವಕಾಶ ನೀಡಲಾಗುವುದು ಎಂದು ಭರವಸೆಯನ್ನು ಕೈ ಪಕ್ಷ ನೀಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಯು.ಟಿ.ಕೆ ಇಲ್ಲಿ ಯಾರೂ ಕೂಡ ಸ್ಪರ್ಥಿಗಳಲ್ಲ ವಿನಯ್ ಕುಮಾರ್ ಸೊರಕೆ,ರಮಾನಾಥ ರೈ, ಮಿಥುನ್ ರೈ ಅಥವಾ ರಾಜೇಂದ್ರ ಕುಮಾರ್ ಯಾರಿಗೆ ಟಿಕೆಟ್ ಸಿಕ್ಕಿದರು ಪಕ್ಷದ ಎಲ್ಲಾ ನಾಯಕರೂ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾರೆ

Be the first to comment

Leave a Reply

Your email address will not be published.


*