“ಮೀನುಗಾರ ಮಹಿಳೆಯರಿಗೆ ಗೌರವಾರ್ಪಣೆ ಮತ್ತು ಸಾಧಕಿ ಪ್ರಶಸ್ತಿ ಪ್ರಧಾನ”

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪು ಮತ್ತು ಮೋಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಮೀನುಗಾರ ಮಹಿಳೆಯರಿಗೆ ಗೌರವಾರ್ಪಣೆ ಮತ್ತು ಸಾಧಕಿ ಪ್ರಶಸ್ತಿ ಪ್ರಧಾನ” ಸಮಾರಂಭ ನಿನ್ನೆ ಶ್ಯಾಮಿಲಿ ಸಭಾಂಗಣ,ಅಂಬಲಪಾಡಿಯಲ್ಲಿ ನೇರವೇರಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿ.ಎಂ ಸಿದ್ಧರಾಮಯ್ಯ ಮಹಿಳಾ ಪ್ರಧಾನ ಸಮಾಜವಾಗಿ ಬದಲಾಗುತ್ತಿರುವ ಪ್ರಪಂಚಕ್ಕೆ ಈ ಸಾಧಕಿಯರೇ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮೀನುಗಾರಿಕಾ ವೃತ್ತಿ ಬಹಳ ಶ್ರಮದ ಕೆಲಸ.ನಮ್ಮ ಸರಕಾರ ಮೀನುಗಾರರಿಗೆ ಅನೇಕ ಸವಲತ್ತುಗಳನ್ನು ನೀಡಿದೆ.ಮೀನುಗಾರರಿಗೆ ಬಡ್ಡಿ ರಹಿತ ಸಾಲ ಸೌಲಬ್ಯ ಒದಗಿಸಿದ್ದು ಇನ್ನಷ್ಟು ಮೀನುಗಾರರ ಬೇಡಿಕೆಗಳ ಕುರಿತು ಚಿಂತಿಸಲಾಗುವುದೆಂದರು.

Be the first to comment

Leave a Reply

Your email address will not be published.


*