ಮೋದಿ ವಿರುದ್ಧ ಸಿದ್ಧು ವಾಗ್ದಾಳಿ

ಉಡುಪಿ: ಉಡುಪಿ: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳು ಗೆಲುವು ಸಾಧಿಸಿ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.

ರವಿವಾರ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಜರಗಿದ “ಪರಿವರ್ತನಾ ರ್ಯಾಲಿ’ಯಲ್ಲಿ ಅವರು ಮಾತನಾಡಿದರು.

 

ಸಿದ್ದರಾಮಯ್ಯ, ಮಾತನಾಡಿ ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ೫ ವರ್ಷಗಳ ಕಾಲ ಲೋಕಸಭಾ ಸದಸ್ಯರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ?ಸ್ವತಃ ಬಿಜೆಪಿಯವರೇ ಶೋಭಾರನ್ನು ತೆಗೆಯಿರಿ ಎನ್ನುತ್ತಾರೆ.ಶೋಭಾ ಅಭಿವೃದ್ಧಿ ವಿಚಾರದಲ್ಲಿ ಬಿಗ್ ಝೀರೋ.ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೂ ಕಾಣೆಯಾದ ಮೀನುಗಾರರನ್ನು ಹುಡುಕುವ ಪ್ರಯತ್ನ ಮಾಡಿಲ್ಲ.ನಾನು ಸಿ.ಎಂ ಆಗಿದ್ದ ಸಂದರ್ಭದಲ್ಲಿ ಉಡುಪಿಗೆ ೨ ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇನೆ.೫ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಬಿಜೆಪಿ ಸಮಾಜದ ಒಳಿತಿಗಾಗಿ ಏನು ಮಾಡಿಲ್ಲ.ಇಂತಹಾ ಸರಕಾರ ಮತ್ತೊಮ್ಮೆ ಬೇಕೇ? ಎಂದು ಪ್ರಶ್ನಿಸಿದ್ದಾರೆ.

ಶಾಸಕರ ಖರೀದಿಗೆ ಮೋದಿ ಹಣ
ರಾಜ್ಯದ ಸಮ್ಮಿಶ್ರ ಸರಕಾರವನ್ನು ಕಿತ್ತು ಹಾಕುವುದಕ್ಕಾಗಿ ಶಾಸಕರನ್ನು ಖರೀದಿ ಸಲು ಮೋದಿ ಮತ್ತು ಅಮಿತ್ ಶಾ ೫೦೦ ಕೋ.ರೂ.ಗಳನ್ನು ರಾಜ್ಯ ಬಿಜೆಪಿಗೆ ನೀಡಿದ್ದಾರೆ. ಈ ಹಣ ಅಂಬಾನಿಯಿಂದ ಪಡೆದಿದ್ದಾರೆ ಎಂದು ಆರೋಪಿಸಿದರು.

೫೫ ವರ್ಷಗಳ ಕಾಲ ಕಾಂಗ್ರೆಸ್ ದೇಶಕ್ಕಾಗಿ ಸೇವೆ ಸಲ್ಲಿಸಿದ್ದು ೫೫ ತಿಂಗಳ ಮೋದಿ ಸರಕಾರಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ.ಅಚ್ಛೇ ದಿನ್ ಆಯೇಗಾ ಎಲ್ಲಿದೆ ನಿಮ್ಮ ಅಚ್ಛೇ ದಿನ್? ನಿರಂತರ ಆಗುತ್ತಿರುವ ಬೆಲೆ ಏರಿಕೆಯ ಬಗ್ಗೆ ಮೋದಿ ಸರಕಾರ ಉತ್ತರಿಸಲಿ.೫೬ ಇಂಚಿನ ಎದೆ ಇದ್ದರೆ ಸಾಲದು ಬಡವರ ಬಗ್ಗೆ ಕಾಳಜಿಯ ಹೃದಯವಿರಬೇಕು.ದೇಶದಲ್ಲಿ ರೈತರ ಆದಯ ದುಪ್ಪಟ್ಟು ಮಾಡುವ ಕುರಿತು ಸುಳ್ಳು ಭರವಸೆ ನೀಡಿದ ದೇಶದ ಚೌಕಿದಾರ ಚೋರ್ ಹೇ!ಚೌಕಿಧಾರ್ ಭಷ್ಟ್ರಚಾರದಲ್ಲಿ ಭಾಗಿಧಾರರು.

ಮೋದಿಯ ಆಕರ್ಷಣೀಯ ಭರವಸೆಗಳಿಗೆ ಜನ ಅವಕಾಶ ನೀಡಿದರು.೨೦೧೪ರ ಭರವಸೆ ಎಷ್ಟು ಇಡೆರಿಸಿದ್ದೇವೆಂದು ಮೋದಿ ಹೇಳುತ್ತಿಲ್ಲ.ನಿರೋದ್ಯೋಗ ಶೇಕಡ ೭.೩ ರಷ್ಟು ಹೆಚ್ಚಾಗಿದೆ.ಕೇಂದ್ರದ ಅಂಕಿ ಅಂಶಗಳನ್ನು ಗಮನಿಸಿ ಯುವಕರೆಲ್ಲ ಮತ್ತೊಮ್ಮೆ ಮೋದಿಗೆ ಮತ ಹಾಕುವ ಮುನ್ನ ಆಲೋಚಿಸಿ ಎಂದು ಸಲಹೆ ನೀಡಿದರು.

೪೦ ವರ್ಷಗಳ ರಾಜಕೀಯ ಜೀವನದಲ್ಲಿ ನಾನು ನೋಡಿದ ಹಾಗೆ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಇಡೀ ಸ್ವಂತ್ರತ್ಯ ಭಾರತದಲ್ಲಿ ಮತ್ತೊಬ್ಬರಿಲ್ಲ.ನೀರವ್ ಮೋದಿ,ಅಂಬಾನಿಗೆ ಲಾಭ ಮಾಡುವ ಕೆಲಸ ಬಿಜೆಪಿ ಮಾಡುತ್ತಿದ್ದಾರೆ.

ನಾನು ಯಾವುದೇ ಪಕ್ಷಕ್ಕಾಗಿ ಹೇಳುತ್ತಿಲ್ಲ ಆದರೆ ಸುಳ್ಳುಗಾರರ ಅಳಿವಿಗಾಗಿ ಸತ್ಯದ ಉಳಿವಿಗಾಗಿ ಮಾತನಾಡುತ್ತಿದ್ದೇನೆ.೧೬೫ ಭರವಸೆಗಳಲ್ಲಿ ೧೬೫ ಭರವಸೆಯನ್ನು ಹೆಮ್ಮೆಯಿಂದ ಎದೆ ತಟ್ಟಿ ಹೇಳುತ್ತಿದ್ದೇನೆ.ಬಂದರು ಅಭಿವೃದ್ಧಿ,ಬೋಟ್ ಡಿಸೇಲ್‌ಗಾಗಿ ಸಬ್ಸಿಡಿ ಹೀಗೆ ಹತ್ತು ಹಲವು ಯೋಜನೆ ಮೀನುಗಾರರಿಗೆ ನೀಡಿದ್ದು ನಮ್ಮ ಸರಕಾರವೇ ಹೊರತು ನಿಮ್ಮ ಸಂಸದೆಯಲ್ಲ.ಶೋಭಾ ನೀವೆಲ್ಲಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ರೈತರ ಸಾಲಮನ್ನದ ಕುರಿತು ಮಾತನಾಡುವ ಯಡಿಯೂರಪ್ಪ ತಾವು ಸಿ.ಎಂ ಆಗಿದ್ದಾಗ ರೈತರ ಸಾಲಮನ್ನದ ಬೇಡಿಕೆ ವಿಚಾರದಲ್ಲಿ ನೋಟ್ ಪ್ರಿಂಟಿಂಗ್ ಮಾಡುವ ಮಿಷನ್ ಇಲ್ಲ ಎಂದ ಯಡ್ಡಿಯೂರಪ್ಪ ಇಂದು ರೈತರ ವಿಚಾರದಲ್ಲಿ ಮಾತನಾಡುವ ನೈತಿಕತೆ ಇಲ್ಲ ಎಂದು ವ್ಯಂಗವಾಡಿದರು.

ದೇಶದಲ್ಲಿ ಕಪ್ಪು ಹಣ,ಭ್ರಷ್ಟಾಚಾರ,ನೋಟು ಅಮಾನೀಕರಣ ಸಮಸ್ಯೆಗಳನ್ನು ಸೃಷ್ಠಿಸಿದ ಮೋದಿ ಜಗತತಿನಲ್ಲಿ ಕಾಂತ್ರಿ ಮಾಡುವ ಭಾಷಣ ಮಾಡುತ್ತಿದ್ದಾರೆ.ನೋಟು ಅಮಾನೀಕರಣದಿಂದ ಕಪ್ಪು ಹಣ ಇರುವವರು ನಿದ್ದೆಗೆಟ್ಟುತ್ತಾರೆ ಎಂದ ಪ್ರಧಾನಿ ಬ್ಯಾಂಕ್ ಎದುರು ಸಾಲುಗಟ್ಟಿ ನಿಂತಿದ್ದು ಯಾವುದೇ ಶ್ರೀಮಂತರಲ್ಲ.ಬದಲಾಗಿ ರೈತರು,ಶ್ರಮಿಕ ವರ್ಗದರು ಬ್ಯಾಂಕ್ನಲ್ಲಿ ತಮ್ಮದೇ ಹಣ ತೆಗೆಯಲು ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದಿತು.

ಇಂದಿರಾ ಗಾಂಧಿ ಬಡವರಿಗಾಗಿ ಬ್ಯಾಂಕು ರಾಷ್ಟ್ರೀಕರಣ ಮಾಡಿದ್ದರು.ಆದರೆ ಮೋದಿ ಬಂದ ಮೇಲೆ ಬ್ಯಾಂಕ್‌ಗಳು ಬೀಗ ಹಾಕಿಕೊಂಡಿವೆ.ಇದಕ್ಕೆ ವಿಜಯ ಬ್ಯಾಂಕ್ ವಿಲೀನಿಕರಣವೇ ಸಾಕ್ಷಿ.ಈ ಎಲ್ಲಾ ಮೋದಿಯ ಸಾಧನೆಗೆ ನೀವು ಮತ ನೀಡುತ್ತಿರೇ? ಎಂದು ಪ್ರಶ್ನಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆ ರಾಜಕೀಯದಲ್ಲಿ ಇರಲು ನಾಲಾಯಲ್ಲು.ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದವರು ಇಂದು ಸಂವಿಧಾನ ಬದಲು ಮಾಡಲು ಹೊರಟಿದ್ದಾರೆ.ನಾನೆಲ್ಲಾದರೂ ಪ್ರಧಾನೊಯಾಗಿದ್ದರೇ ಆ ಕೂಡಲೇ ಅಂತಹ ಸಂಸದರನ್ನು ಅಮಾನತು ಮಾಡುತ್ತಿದ್ದೆ.ಇನ್ನು ಗೋಡ್ಸೆಯಿಂದ ಆರಂಭವಾದ ಕೊಲೆಗಡುಗರ ಸಂಸ್ಕೃತಿ ಇಂದು ಜಿಲ್ಲಡಗಡ ಬೆಂಕಿ ಇಡುವ ಹೇಳಿಕೆಯವರೆಗೆ ಬಂದು ಮುಟ್ಟಿದೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿ.ಎಂ ಟೀಕಾ ಪ್ರಹಾರ ಗೈದರು.

ಯು.ಟಿ. ಖಾದರ್, ಆಸ್ಕರ್ ಫೆರ್ನಾಂಡಿಸ್, ಬ್ಲೋಸಂ ಫೆರ್ನಾಂಡಿಸ್, ರಾಜೇಗೌಡ, ಐವನ್ ಡಿ’ಸೋಜಾ, ಸಚಿನ್ ಮೀಗಾ, ಗೋಪಾಲ ಭಂಡಾರಿ, ಗೋಪಾಲ ಪೂಜಾರಿ, ಪುಷ್ಪಾ ಅಮರನಾಥ್, ಆರತಿ ಕೃಷ್ಣ, ಡಾ| ವಿಜಯ ಕುಮಾರ್, ವಿಷ್ಣುನಾಥನ್, ಜನಾರ್ದನ ತೋನ್ಸೆ, ರಾಕೇಶ್ ಮಲ್ಲಿ, ಮಮತಾ ಗಟ್ಟಿ, ಡಾ| ದೇವಿಪ್ರಸಾದ್ ಶೆಟ್ಟಿ, ಜಿ.ಎ. ಬಾವಾ, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ರಮೇಶ್ ಕಾಂಚನ್, ಯತೀಶ್ ಕರ್ಕೇರ ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಕೊಡವೂರು ಅವರು ಸ್ವಾಗತಿಸಿದರು. ನರಸಿಂಹ ಮೂರ್ತಿ ಮತ್ತು ಎಂ.ಎ. ಗಫರ್ ಅವರು ಕಾರ್ಯಕ್ರಮ ನಿರ್ವಹಿಸಿದರು.

Be the first to comment

Leave a Reply

Your email address will not be published.


*