ನೀತಿ ಸಂಹಿತೆ ಉಲ್ಲಂಘಿಸದೆ ಸ್ವಂತ ಕಾರನ್ನು ಬಳಸಿದ ಖಾದರ್

ಲೋಕಸಭಾ ದಿನಾಂಕ ಪ್ರಕಟವಾದ ಬೆನ್ನಲ್ಲೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೆ ಉಡುಪಿಯ ಸಮಾವೇಶ ಮುಗಿದ ನಂತರ ಸರಕಾರಿ ಕಾರನ್ನು ಬಿಟ್ಟು ಸಚಿವರಾದ ಯು.ಟಿ.ಖಾದರ್ ತಮ್ಮ ಸ್ವಂತ ಕಾರಿನಲ್ಲಿ ಮಾಜಿ ಸಿ.ಎಂ ಸಿದ್ಧರಾಮಯ್ಯರಿಗೆ ಸಾರಥಿಯಾಗಿ ಯು.ಟಿ.ಖಾದರ್ ಕಾರು ಚಾಲಾಯಿಸಿದರು.ಕಳೆದ ಬಾರಿ ಮಂಗಳೂರಿನಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲೂ ಸಿದ್ಧರಾಮಯ್ಯನವರು ಆಗಮಿಸಿದ್ದಾಗ ವಿಮಾನ ನಿಲ್ದಾಣದಿಂದ ಸ್ವತಃ ಖಾದರ್ ಸಿದ್ಧರಾಮಯ್ಯನವರನ್ನು ಕೂರಿಸಕೊಂಡು ತಾವೇ ಕಾರನ್ನ ಚಲಾಯಿಸಿದ್ದರು.ಒಟ್ಟಿನಲ್ಲಿ ಹಿರಿಯ ರಾಜಕಾರಣಿ ಸಿದ್ಧರಾಮಯ್ಯ ಕರಾವಳಿಗೆ ಬಂದರೆ ಯು.ಟಿ.ಖಾದರ್ ಸ್ವತಃ ಸ್ಟೇರಿಂಗ್ ತಿರುಗಿಸುವಲ್ಲಿ ಹೆಚ್ಚು ಉತ್ಸಾಹಕರಾಗಿರುತ್ತಾರೆಂದರೆ ತಪ್ಪಾಗಲಾರದು.ಸಚಿವರ ಸರಳತೆಗೆ ಎಲ್ಲೆಡೆ ಜನಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Be the first to comment

Leave a Reply

Your email address will not be published.


*