ಉಡುಪಿಯಲ್ಲಿ ದಿನೇಶ್ ಗುಂಡೂರಾವ್ ವಾಗ್ದಾಳಿ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾರ್ಚ್ ೧೦ರಂದು ಮಧ್ಯಾಹ್ನ ೨.೩೦ ಗಂಟೆಗೆ ನಗರದ ಕಲ್ಸಂಕ ಬಳಿಯ ರಾಯಲ್ ಗಾರ್ಡನ್ ನಲ್ಲಿ ಪರಿವರ್ತನಾ ಸಮಾವೇಶ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್ ಬಿಜೆಪಿಯವರು ಮಾತು ತಪ್ಪಿದ ಸುಳ್ಳುಗಾರರು.ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಯುವಕರಿಗೆ ದೇಶದಲ್ಲಿ ಮಹಾನ್ ಬದಲಾವಣೆ ತರುತ್ತೇವೆಂದು ಮಾತು ನೀಡಿದ್ದರು.ಇದನ್ನು ನಂಬಿದ ಜನತೆ ಮೋದಿಗೆ ಮತ ನೀಡಿದರು.ಇದರ ಬದಲಾಗಿ ಮೋದಿ ೫ ವರ್ಷದಲ್ಲಿ ಕಳೆದ ೪೬ ವರ್ಷಗಳಿಲ್ಲದ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ.ಈ ಕುರಿತು ಸ್ಟ್ರಾರ್ಜಿಕಲ್ ಕೌನ್ಸಿಲಿಂಗ್ ವರದಿ ಬಿಡುಗಡೆಗೊಳಿಸಲು ಹೋದರೆ ಮೋದಿ ತಡೆ ನೀಡಿದ್ದರು.ಇದರಿಂದ ತಜ್ಙರು ರಾಜಿನಾಮೆ ನೀಡಿದರು.
ಬಡತನ,ನಿರುದ್ಯೋಗ ಹೀಗೆ ೫ ವರ್ಷಗಳಲ್ಲಿ ದೇಶದೆಲ್ಲೆಡೆ ತಾಂಡವ ಆಡುತ್ತಿದೆ.
ಮೋದಿ ದೇಶದ ಅಭಿವೃದ್ಧಿ ಬಿಟ್ಟು ಕೋಮುವಾದವೆಂಬ ವಿಷಬೀಜ ಬಿತ್ತಿ ಯುವಕರಿಗೆ ಹಾದಿ ತಪ್ಪಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.ಬಿಜೆಪಿಗೆ ನೀತಿ,ನಿಯತ್ತು,ಧರ್ಮವಿಲ್ಲ.ಕೇವಲ ಅಧಿಕಾರದ ದಾಹವಿದೆ.ಅಧಿಕಾರದ ದುರುಪಯೋಗ ಪಡಿಸಿದ ಬಿಜೆಪಿ ತಮ್ಮ ಸ್ವಾರ್ಥಕ್ಕೆ ಎಲ್ಲವನ್ನು ಬಳಸಿಕೊಲ್ಳುತ್ತಿದೆ.ಇದು ದೇಶದಲ್ಲಿ ಹಿಂಸೆಗೆ ಪ್ರಚೋಧಿಸುತ್ತಿವೆ.ಕೋಮುವಾದ ಎಂಬ ವಿಷವೀಜ ಬಿತ್ತಿದ ಬಿಜೆಪಿಯಿಂದ ಇಂದು ದೇಶದಲ್ಲಿ ಹಿಂಸಾತ್ಮಕ ಪ್ರಚೋದನೆಗಳು,ಹತ್ಯೆಗಳು ನಡೆಯುತ್ತಿವೆ.ಕೋಮುವಾದ ಸಿದ್ಧಾಂತದಿಂದ ಹಲವಾರು ಅಮಾಯಕರ ಬುದ್ಧಿ ಜೀವಿಗಳ ಹತ್ಯೆಯಾಗಿದೆ.ಕಾನೂನು ಕೈ ತೆಗೆದುಕೊಳ್ಳುವ ಧೈರ್ಯ ಬಂದಿದೆ.ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗಿದ್ದು ದೇವರ ಹೆಸರಿನಲ್ಲಿ ಮಾಡುವ ಹಿಂಸೆ ಯಾವ ಧರ್ಮ ಒಪ್ಪೋದಿಲ್ಲ.ಇಂತಹ ನೀಚ ಕೆಲಸ ಮಾಡಿ ವೈಭವಿಕರಿಸಿಕೊಳ್ಳಲಾಗಿದೆ.
ಗಾಂಧಿ ಹತ್ಯೆಯನ್ನು ಹಿಂದು ಮಹಾಸಭಾ ಸಂಭ್ರಮಿಸುವ ವಾತವರಣ ದೇಶದಲ್ಲಿದೆ.ಈ ಎಲ್ಲಾ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ಕೇವಲ ಕಾಂಗ್ರೆಸ್ ಪಕ್ಷಕ್ಕಿದೆ.ನಮ್ಮ ಪಕ್ಷ ದೇಶಕ್ಕಾಗಿ ಎಷ್ಟೋ ನಾಯಕರನ್ನು ಕಳೆದುಕೊಂಡಿದೆ.
ಮೋದಿ,ಮೋದಿ ಎನ್ನುತ್ತಿದ್ದವರಿಗೆ ಇಂದು ಸತ್ಯಾಂಶ ಬಯಲಾಗಿದೆ.ಅಧಿಕಾರಕ್ಕೆ ಬಂದ ಮೋದಿ ಸ್ವಿಝ್ ಬ್ಯಾಂಕ್ನಿಂದ ಕಪ್ಪು ಹಣ ವಾಪಾಸ್ಸು ತರುತ್ತೇನೆಂದು ಪೊಳ್ಳು ಆಶ್ವಾಸನೆ ನಿಡಿದ್ದರು.ಇದರ ಬದಲಾಗಿ ಮೋದಿಯ ಸ್ನೇಹಿತರಾದ ನೀರವ್ ಮೋದಿ ಹೀಗೆ ಅನೇಕರು ಬ್ಯಾಂಕ್ಗಳಿಗೆ ಟೋಪಿ ಹಾಕಿದರು.ಈಗ ಚೌಕಿದಾರ ಏನು ಮಾಡುತ್ತಿದ್ದಾರೆ?.ಇನ್‌ಕಾಮ್ ಟ್ಯಾಕ್ಸ್ ಡಿಪಾರ‍್ಟ್ಮೆಂಟ್ ಈ ಬಗ್ಗೆ ಸೂಚನೆ ನಿಡಿದ್ದರು ಮೋದಿ ತನ್ನ ಸ್ನೇಹಿತರಿಗೆ ಸಾಥ್ ನೀಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಮಾಜಿ ಸಚಿವರುಗಳಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಜಿಲ್ಲೆಯ ಮಾಜಿ ಶಾಸಕರುಗಳು ಸಮಾವೇಶದಲ್ಲಿ ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*