ಬಾರ ಕೂರು ಕೋಟೆಯಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಆಳುಪೋತ್ಸವವನ್ನು ಉದ್ಘಾಟಿಸಿದ-ಸಚಿವೆ ಡಾ.ಜಯಮಾಲಾ

ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಬಾರ ಕೂರು ಕೋಟೆಯಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ಆಳುಪೋತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಾರಕೂರು ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಲು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಈಗಾಗಲೇ ಈ ಕುರಿತು ಸರಕಾರದ ಗಮನ ಸೆಳೆಯಲಾಗಿದೆ. ಇದರ ಹಿಂದೆ ನನ್ನ ಉಸಿರು ಕೂಡ ಕೆಲಸ ಮಾಡುತ್ತದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.

ಆಳುಪೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿರುವ ಹೆರಿಟೇಜ್ ವಾಕ್‌ಗೆ ಸಚಿವ ಜಯಮಾಲಾ ಬಾರಕೂರಿನ ಐತಿಹಾಸಿಕ ಸ್ಥಳ ಸಿಂಹಾಸನ ಗುಡ್ಡೆಯಲ್ಲಿ ಚಾಲನೆ ನೀಡಿದರು. ಬಳಿಕ ವಿವಿಧ ಜಾನಪದ ತಂಡಗಳನ್ನೊಳಗೊಂಡ ಶೋಭಾಯಾತ್ರೆಯು ಬಾರಕೂರು ಕೋಟೆವರೆಗೆ ಸಾಗಿ ಬಂತು. ಇದೇ ಸಂದರ್ಭದಲ್ಲಿ ಸಚಿವರು ಹೆರಿಟೇಜ್ ವಾಕ್ ಆಂಡ್ರಾಯಿಡ್ ಆಯಪ್‌ನ್ನು ಬಿಡುಗಡೆಗೊಳಿಸಿದರು. ಬಾರಕೂರು ಕೋಟೆಯಲ್ಲಿ ಹಮ್ಮಿಕೊಳ್ಳ ಲಾದ ಫಲಪುಷ್ಪ ಪ್ರದರ್ಶನಕ್ಕೆ ಸಚಿವರು ಚಾಲನೆ ನೀಡಿದರು. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿ.ಪಂ ಅಧ್ಯಕ್ಷ ದಿವಾಕರ ಬಾಬು, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಶ್ರೀ ಸಂತೋಷ್ ಗುರೂಜಿ, ಮನೋಹರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*