ಫಲ್ಗುಣಿ ನದಿಯಲ್ಲಿ ಸಚಿವ ಖಾದರ್ ಸ್ಪೀಡ್ ಬೋಟ್ ಪಯಣ

ಗಗನಚುಂಬಿ ಕಟ್ಟಡದ ನಡುವೆ,ಬಿಸಿಲ ಧಗೆಯ ನಗರ ಜೀವನದಿಂದ,ತುಸು ದೂರವಾಗಿ ಪ್ರಕೃತಿ ಮಡಿಲಿನಲ್ಲಿ ದ.ಕ ಜಿಲ್ಲಾಡಳಿತದ ನದಿ ಉತ್ಸವ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ಬಂಗ್ರ ಕೂಳೂರು ಬಳಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ನದಿ ಉತ್ಸವವು ಪ್ರಾಕೃತಿಕ ಸೊಬಗನ್ನು ಸವಿಯುವ ಜೊತೆಗೆ ಫಲ್ಗುಣಿ ನದಿಯ ಸೌಂದರ್ಯವನ್ನು ಆಸ್ವಾದಿಸಲು ಅವಕಾಶವನ್ನು ಮಾಡಿ ಕೊಟ್ಟಿದೆ.ಶಾಂತವಾಗಿ ಹರಿಯುವ ಫಲ್ಗುಣಿ ನದಿಯ ತೀರಗಳಾದ ಸುಲ್ತಾನ್ ಬತ್ತೇರಿ,ಬಂಗ್ರಕುಳೂರು ಸುತ್ತಮುತ್ತಲೆಲ್ಲ ಸಡಗರ.ಕೂಳೂರು ಹಾಗೂ ಬಂಗ್ರ ಕೂಳೂರು ಬಳಿ ನದಿಯಲ್ಲಿ ಸಾಹಸ ಜಲಕ್ರೀಡೆಗಳು ನೋಡುಗರನ್ನು ಆಕರ್ಷಿಸಿದರೆ,ಕಯಾಕಿಂಗ್,ಸ್ಪೀಡ್ ಬೋಟ್ ಮೊದಲಾದ ಜಲಕ್ರೀಡೆಗಳು ಫಲ್ಗುಣಿ ನದಿಯ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತಾ ದೋಣಿಯಲ್ಲಿ ಒಂದು ತೀರದಿಂದ ಮತ್ತೊಂದು ತೀರಕ್ಕೆ ನದಿ ಉತ್ಸವಕ್ಕೆ ಸಾಗುವವರಿಗೆ ಮುದ ನೀಡುತ್ತಿದೆ.

ಫಲ್ಗುಣಿ ನದಿಯಲ್ಲಿ ಸಚಿವ ಖಾದರ್ ಸ್ಪೀಡ್ ಬೋಟ್ ಪಯಣ
ನದಿ ಉತ್ಸವದ ಅಂಗವಾಗಿ ಫಲ್ಗುಣಿ ನದಿಯಲ್ಲಿ ಪರಿಣಿತರ ಜಲಸಾಹಸ ಕ್ರೀಡೆಗಳು ನೋಡುಗರ ಕಣ್ಮನ ಸೆಳೆಯಿತು.ಸಾಹಸ ಪ್ರಿಯ ಸಚಿವ ಖಾದರ್ ರವರು ಬಂಗ್ರಕುಳೂರು ಜಟ್ಟಿ ಬಳಿ ಸಹಾಯಕರೊಂದಿಗೆ ಸ್ಪೀಡ್ ಬೋಟ್ ನಲ್ಲಿ ನದಿ ನೀರಿನಲ್ಲಿ ಓಲಾಡುತ್ತಾ ಗಮನ ಸೆಳೆದರು.

Be the first to comment

Leave a Reply

Your email address will not be published.


*