ಜ.12ರಂದು ನಗರದ ಕುದ್ಮಲ್ ರಂಗರಾವ್ ಪುರವನದಲ್ಲಿ ದಿ|ಉಳ್ಳಾಲ ಶ್ರೀನಿವಾಸ್ ಮಲ್ಯ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ

ಜ.12ರಂದು ನಗರದ ಕುದ್ಮಲ್ ರಂಗರಾವ್ ಪುರವನದಲ್ಲಿ ದಿ|ಉಳ್ಳಾಲ ಶ್ರೀನಿವಾಸ್ ಮಲ್ಯ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವರು ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ,ದಿ|ಉಳ್ಳಾಲ ಶ್ರೀನಿವಾಸ್ ಮಲ್ಯ ರವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.ನಂತರ ಮಾತನಾಡಿದ ಅವರು ಸಮಾಜದಲ್ಲಿ ಗೌರವವುಳ್ಳ ವ್ಯಕ್ತಿಗಳಿಗೆ ಸಮಾಜಮುಖಿಯಾಗಿ ಸೇವೆಸಲ್ಲಿಸಿದ ಗಣ್ಯವ್ಯಕ್ತಿಗಳಿಗೆ ಪ್ರಶಸ್ತಿ ಪ್ರಧಾನ ಮಾಡುವ ಅರ್ಥಪೂರ್ಣ ಕಾರ್ಯಕ್ರಮವಾಗಿದೆ.
ದ.ಕ ಜಿಲ್ಲೆಯ ಯುವ ಪೀಳಿಗೆಗೆ ಬೇರೆ ವ್ಯಕ್ತಿಗಳು ಆದರ್ಶಪ್ರಾಯರಾಗಿರುವುದಕ್ಕಿಂತ ,ಪ್ರಶಸ್ತಿ ಸ್ವೀಕರಿಸಿದ 5 ಗಣ್ಯ ವ್ಯಕ್ತಿಗಳೇ ಆದರ್ಶ ವ್ಯಕ್ತಿಗಳು.ನಮ್ಮ ಜಿಲ್ಲೆಗೆ ದಿ|ಉಳ್ಳಾಲ ಶ್ರೀನಿವಾಸ್ ಮಲ್ಯ ರವರ ಕೊಡುಗೆ ಅಪಾರವಾಗಿದ್ದು,ಏರ್‍ಪೋರ್ಟ್ ಕೂಡ ಇವರ ಕೊಡುಗೆಯಾಗಿದೆ.ಆದರೆ ಕೇಂದ್ರ ಸರಕಾರದ ಎಲ್ಲಾ ಖಾಸಗೀಕರಣದ ಭರಾಟೆಯಿಂದ ಮೂಲತಃ ವ್ಯಕ್ತಿಗಳ ಕೊಡುಗೆ ಅಳಿಸಿ ಹಾಕುವಂತಿದೆ ಎಂದು ಹೇಳಿದರು.
ವೀರಪ್ಪ ಮೊಯ್ಲಿ ಕಾರ್ಯಕ್ರಮವನ್ನದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ಐವನ್ ಡಿ’ಸೋಜ,ಹರೀಶ್ ಕುಮಾರ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*