ಜಾಮಿಅಃ ಕನ್ನಡ ಸಂಗಮ ಉದ್ಘಾಟನೆಗೆ ಶೈಖುನಾ ತೋಡಾರು ಉಸ್ತಾದ್

ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಇದರ ಪ್ರಪ್ರಥಮ ನೇರವಾಗಿ ನಡೆಸುವ ಜಾಮಿಅಃ ನೂರಿಯ್ಯಾ ಅರಬಿಯ್ಯಾ ಪಟ್ಟಿಕ್ಕಾಡ್ ಫೈಝಾಬಾದ್ , ಪೆರಿದಲ್ ಮಣ್ಣ ಮಲಪ್ಪುರಂ ಇದರ ೫೬ ನೇ ವಾರ್ಷಿಕೋತ್ಸವ ಹಾಗೂ ೫೪ ನೇ ಸನದುದಾನ ಮಹಾ ಸಮ್ಮೇಳನವು ಜನವರಿ ೦೯ ರಿಂದ ೧೩ ರ ತನಕ ನಡೆಯಲಿದೆ. ೧೩ ಭಾನುವಾರ ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಪಿ.ಎಂ.ಎಸ್.ಎ ಪೂಕೋಯ ತಂಙಳ್ ನಗರ ಫೈಝಾಬಾದಿನಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಕನ್ನಡ ಸಂಗಮವು ನಡೆಯಲಿದೆ . ಈ ಕಾರ್ಯಕ್ರಮವನ್ನು ಫೈಝೀಸ್ ಕರ್ನಾಟಕ ರಾಜ್ಯಾಧ್ಯಕ್ಷರು , ಸಮಸ್ತ ಮುದರ್ರಿಸೀನ್ ಜಿಲ್ಲಾಧ್ಯಕ್ಷರು , ಸಯ್ಯಿದ್ ಮದನಿ ಶರೀಅತ್ ಕಾಲೇಜು ಉಳ್ಳಾಲ ಪ್ರಾಂಶುಪಾಲರಾದ ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಇವರು ಉದ್ಘಾಟಿಸಲಿದ್ದಾರೆ ಎಂದು ಶೈಖುನಾ ತೋಡಾರು ಉಸ್ತಾದ್ ಅಭಿಮಾನಿ ಬಳಗ ಕರ್ನಾಟಕ ಇದರ ಸಂಯೋಜಕರಾದ ಅಝೀಮ್ ಕೆ.ಸಿ.ರೋಡು ಪ್ರಕಟನೆಯಲ್ಲಿ ತಿಳಿಸಿದ್ದಾರೆ .

Be the first to comment

Leave a Reply

Your email address will not be published.


*