ಕಾಂಗ್ರೆಸ್ ಭವನದಲ್ಲಿ ರಮಾನಾಥ ರೈ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ

ದ.ಕ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ರಮಾನಾಥ ರೈ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವರು ವಿಜಯ ಬ್ಯಾಂಕ್ ವಿಲಿಕರಣದ ಪ್ರತಿಭಟನೆ ಯಶಸ್ವಿಯಾಗಿದ್ದು,ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂತೆಗೆದುಕೊಲ್ಳದಿದ್ದಲಿ ಮುಂದಿನ ಹಂತದ ಕುರಿತು ಗಂಭೀರವಾಗಿ ಚಿಂತಿಸಲಾಗುವುದು ಎಂದಿದ್ದಾರೆ.ಇನ್ನು ಎಲ್ ಆಂಡ್ ಟಿ ಕಂಪೆನಿ ಗುತ್ತಿಗೆ ಪಡಕೊಂಡ ಗುಂಡ್ಯದಿಂದ ಬಿ.ಸಿ.ರೋಡು ತನಕ ನಾಲ್ಕು ಪಥಗಳ ಹೆದ್ದಾರಿ ಕಾಮಗಾರಿ ಸ್ಥಗಿತಗೊಂಡಿದೆ. ಹೆದ್ದಾರಿಯ ಬದಿಯಲ್ಲಿ ಆಳವಾದ ಗುಂಡಿ ತೆಗೆಯಲಾಗಿದ್ದು, ವಾಹನ ಸಂಚರಿಸುವವರುಗೆ ಅಪಾಯಕಾರಿಯಾಗಿದೆ.ಮಂಗಳೂರುಃ ಹಾಸನ -ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೂಡಲೇ ಪೂರೈಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸಲಿದೆ.ಜನವರಿ ೧೪ರಂದು ನೆಲ್ಯಾಡಿಯಲ್ಲಿ ಪಾದಯಾತ್ರೆ ಉದ್ಘಾಟನೆ ಆಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ಪಾದಾಯಾತ್ರೆಯಲ್ಲಿ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ,ಮಾಜಿ ಶಾಸಕರಾದ ಮೊಯ್ದೀನ್ ಬಾವ,ಕೆ.ಪಿ.ಸಿ.ಸಿ ಅಧ್ಯಕ್ಷರಾದ ದಿನೇಶ್ ಗುಂಡುರಾವ್,ಜೆ.ಆರ್ ಲೋಬೋ ಹೀಗೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

Be the first to comment

Leave a Reply

Your email address will not be published.


*