ಅದಮ್ಯ ಚೇತನ ವಿವೇಕರ ಜನ್ಮದಿನ

“ನಾವು ಏನನ್ನು ಯೋಚಿಸುತ್ತೀವೋ ಅದೇ ನಮ್ಮನ್ನು ರೂಪಿಸುತ್ತದೆ. ಆದ್ದರಿಂದ ನೀವು ಏನು ಯೋಚಿಸುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆ ಇರಲಿ. ಮಾತು ಮುಖ್ಯವಲ್ಲ, ಯೋಚನೆ ಜೀವಂತವಾಗಿರುತ್ತದೆ… ಅದು ಬಹುದೂರ ಪ್ರಯಾಣಿಸುತ್ತದೆ!” ಈ ಜಗತ್ತು ಕಂಡ ಅದಮ್ಯ ಚೇತನ ಸ್ವಾಮಿ ವಿವೇಕಾನಂದ ಜನವರಿ ೧೨, ೧೮೬೩ -ಜುಲೈ ೪, ೧೯೦೨ರ ಅದೆಷ್ಟೋ ಸ್ಫೂರ್ತಿ ವಾಣಿಗಳಲ್ಲಿ ಇದೂ ಒಂದು. ಮೃಗಸದೃಶನಾದವನನ್ನು ಮನುಷ್ಯನನ್ನಾಗಿ ಮಾಡುವ, ಮನುಷ್ಯನನ್ನು ದೇವರನ್ನಾಗಿ ಮಾಡುವ ಉದಾತ್ತ ಚಿಂತನೆಯ ಹರಿಕಾರ ವಿವೇಕಾನಂದರು. ಕೇವಲ ಹೇಳಿದ್ದಷ್ಟೇ ಅಲ್ಲ, ತಮ್ಮ ತತ್ತ್ವಗಳನ್ನೆಲ್ಲ ತಾವೇ ಪಾಲಿಸಿ ಆದರ್ಶರಾದವರು ವಿವೇಕಾನಂದರು. ಒಂದರ್ಥದಲ್ಲಿ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿಕೊಂಡವರು. ಸನಾತನ ಧರ್ಮ, ಭಾರತೀಯತೆ, ಹಿಂದುತ್ವ, ಅಧ್ಯಾತ್ಮದ ಬಗೆಗೆ ಎಳೆ ವಯಸ್ಸಿನಲ್ಲೇ ಅವರಿಗಿದ್ದ ಅದಮ್ಯ ಉತ್ಸಾಹ, ಅಭಿಮಾನ ಅವರನ್ನು ಚಿಕಾಗೋದ ವಿಶ್ವಧರ್ಮ ಸಮ್ಮೇಳನದವರೆಗೂ ಕೊಂಡೊಯ್ದಿತ್ತು. ಇಡೀ ವಿಶ್ವದ ದೃಷ್ಟಿಯಲ್ಲಿ ಭಾರತವೆಂಬ ಮಹೋನ್ನತ ದೇಶದ ಕೀರ್ತಿಯನ್ನು ಮತ್ತಷ್ಟು ಔನ್ನತ್ಯಕ್ಕೇರಿಸಿದ ದೇಶಪ್ರೇಮಿ ವಿವೆಕಾನಂದರು.

ವಿವೇಕಾನಂದರ ನೆನಪಲ್ಲಿ ಜ.೧೨ರಂದು ಮಲ್ಲೇಶ್ವರದಲ್ಲಿ ರಾಷ್ಟ್ರೀಯ ಯುವದಿನ ಅವರ ಜನ್ಮದಿನವಾದ ಜನವರಿ ೧೨ ನ್ನು ಪ್ರತಿ ವರ್ಷ ’ರಾಷ್ಟ್ರೀಯ ಯುವದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ದಿನ ದೇಶದ ವಿವಿಧ ರಾಜ್ಯಗಳಲ್ಲಿ ತರಹೇವಾರಿ ಕಾರ್ಯಕ್ರಮಗಳನ್ನು ಮಾಡಿ ’ಯುವದಿನ’ದ ಆಶಯವನ್ನು ತೋರಿಸಿಕೊಡಲಾಗುತ್ತದೆ.

ಮಂಗಳೂರಿನ ವಿವೇಕ ಚಿಂತನ ಸಮಿತಿ ಹಾಗೂ ಯುವ ಫ್ರೇಂಡ್ಸ್ ಕದ್ರಿ ಕಂಬಳವತಿಯಿಂದ ೧೫೬ನೇ ವಿವೇಕಾನಂದ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಹಾಗೂ ಶ್ರೀ ಸ್ವಾಮಿ ಧರ್ಮಪ್ರತಾನಂದಜಿ ಮಹಾರಾಜ್ ಆಗಮಿಸಿದ್ದರು.ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಗಣ್ಯ ಅತಿಥಿಗಳಿಗೆ ವಿವೇಕಾನಂದರ ತೊಡುಗೆಯಲ್ಲಿ ಆಕರ್ಷಿಸಿದ ಪುಟಾಣಿ ಪೋರ ಎಲ್ಲರ ಗಮನಸೆಳೆಯಿತು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸ್ವಾಮಿ ಧರ್ಮಪ್ರತಾನಂದಜಿ ಮಹಾರಾಜ್ ಎಲ್ಲಾ ಧರ್ಮಗಿಂತ ದೊಡ್ಡದಾದ್ದು ಮಾನವತಾ ಧರ್ಮ.ಸ್ವಾಮಿ ವಿವೇಕಾನಂದರ ಆದರ್ಶ ಎಲ್ಲರಿಗೂ ಮಾದರಿ.ವಿವೇಕಾನಂದರ ರಾಮಕೃಷ್ಣ ಮಿಷನಿಂದಿಗೂ ಜನರಿಗೆ ಮಾದರಿ.ಎಲ್ಲರ ಸೇವೆಯಿಂದಲೆ ಗುರಿ ತಲುಪಲು ಸಾಧ್ಯ.ವಿವೇಕಾನಂದರ ಆದರ್ಶ ಪಾಲಿಸುವುದರಿಂದಲೇ ನಿಜವಾದ ಜನ್ಮ ದಿನವಾಗುತ್ತದೆ ಹೊರತು ಒಂದು ದಿನದ ಕಾರ್ಯಕ್ರಮದಿಂದಲ್ಲವೆಂದು ನುಡಿದಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಸಚಿವರಾದ ಯು.ಟಿ ಖಾದರ್ ಮಾತನಾಡಿ ಇಡಿ ದೇಶದಲ್ಲಿ ಯುವಕರಿಗೆ ಕೊಡುಗೆ ನಿಡಬಲ್ಲ ಕಾರ್ಯಕ್ರಮವೆಂದರೆ ಸದು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮೆಲುಕು ಹಾಕಿ ಅವರ ಹಾದಿಯಲ್ಲಿ ನಡೆಯುವ ರೀತಿ.ಗಾಂಧೀಜಿ ಹಾಗೂ ಅಂಬೇಡ್ಕರ್ ಜೀವನ ಚರಿತ್ರೆಯ ಜೊತೆಗೆ ವಿವೇಕಾನಂದರ ಪುಸ್ತಕ ಓದಿದರೆ ಬದುಕನ್ನೆ ಬದಲಿಸಬಹುದು.ಚಿಕಾಗೊ ವಿಶ್ವ ಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಭಾಷಣದ ಆರಂಭದ ಸಾಲನ್ನು ನೆನಪಿಸಿದ ಸಚಿವರು ಇಡೀ ವಿಶ್ವವೆ ಭಾರತದತ್ತ ಹಿಂತಿರುಗಿ ನೋಡುವಂತೆ ಮಾಡಿದ ಕೀರ್ತಿ ಸಲ್ಲುತ್ತದೆ ಎಂದರು.ಇಡೀ ಪ್ರಪಂಚಕ್ಕೆ ಸಹೋದರತ್ವ ಸಾರಿದ ಪರಿ ನಮ್ಮೆಲ್ಲರಿಗೂ ಮಾರ್ಗದರ್ಶನವೆಂದು ನರೇಂದ್ರರ ಜೀವನ ಹಾದಿಯನ್ನು ನೆನಪಿಸಿದರು.

Be the first to comment

Leave a Reply

Your email address will not be published.


*