ನಾನು ಆಟವಾಡುವ ಕಾಲ ಬರುತ್ತದೆ, ಆಗ ಯಾರೇನು ಮಾಡಿದ್ದಾರೆ ಎಂದು ಹೇಳುತ್ತೇನೆ’: ’ಡಿಕೆಶಿ ಹೊಸ ಬಾಂಬ್’

ಬೆಂಗಳೂರು: ನಾನು ಆಟವಾಡುವ ಕಾಲ ಬರುತ್ತದೆ, ಆಗ ಯಾರೇನು ಮಾಡಿದ್ದಾರೆ ಎಂದು ಹೇಳುತ್ತೇನೆ ಅವರು ಹೇಳಿದ್ದಾರೆ.

ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ ಯಾರೋ ಗಾಡಿಯಲ್ಲಿ ದುಡ್ಡು ಇಟ್ಟುಕೊಂಡರೆ ಇದಕ್ಕೂ ಪುಟ್ಟರಂಗ ಶೆಟ್ಟಿಗೂ ಏನು ಸಂಬಂಧ ಇಲ್ಲ. ಪುಟ್ಟರಂಗ ಶೆಟ್ಟಿ ರಾಜೀನಾಮೆ ನೀಡಬೇಕಾದ ಅವಶ್ಯಕತೆ ಇಲ್ಲ. ನಾನು ಕೆಲವೊಂದನ್ನು ಬಿಚ್ಚಬೇಕಾಗುತ್ತದೆ. ಈ ಹಿಂದೆ ಕೋಟಿ ಹಣ ಸಿಕ್ಕಿತ್ತು, ಅದು ಏನಾಯ್ತು? ಯಾರದು ಹಣ? ಚೆಕ್‌ನಲ್ಲಿ ದುಡ್ಡು ತೆಗೆದುಕೊಂಡಿದ್ದು ಗೊತ್ತಿಲ್ಲವಾ ಎಂದು ಪ್ರಶ್ನಿಸಿದರು.

ಇನ್ನು ಡಿಸ್ನಿ ಲ್ಯಾಂಡ್ ಮಾದರಿ ಕೆಆರ್​ಎಸ್ ಅಭಿವೃದ್ಧಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿ ಈಗಿರುವ ಗಾರ್ಡನ್‌ಗೆ ಧಕ್ಕೆ ಆಗದ ರೀತಿ ಮೇಲ್ದರ್ಜೆಗೇರಿಸುತ್ತೇವೆ. ಪ್ರವಾಸೋದ್ಯಮ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮಾಡುತ್ತೇವೆ. ವಿರೋಧ ಮಾಡುವವರು ಮಾಡಲಿ. ಈ ಹಿಂದೆ ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದಾಗ ವಿರೋಧಿಸಿದ್ದರು. ಈಗ ವಿದ್ಯುತ್‌ನ್ನು ನಾವು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದೇವೆ ಅಂತ ಹೇಳಿದರು.

Be the first to comment

Leave a Reply

Your email address will not be published.


*