ಅರಬಿಯನ್ ಬಿಸಿನೆಸ್ ಸಾಪ್ತಾಹಿಕದ ಮುಖಪುಟದಲ್ಲಿ ತುಂಬೆ  ಮೊಯ್ದೀನ್

ಕರಾವಳಿಯ ಹೆಮ್ಮೆಯ ಉದ್ಯಮಿ ಡಾ.ತುಂಬೆ ಮೊಯ್ಡೀನ್ ಅವರ ಕುರಿತಾಗಿ ಅರಬಿಯನ್ ಬಿಸಿನೆಸ್ ಸಾಪ್ತಾಹಿಕ ಮುಖಪುಟ ಲೇಖನ ಪ್ರಕಟಿಸಿದ್ದು, ವಿಶ್ವದಾದ್ಯಂತ ತುಂಬೆ ಗ್ರೂಪ್ ಅತ್ಯಂತ ವೇಗವಾಗಿ ತಮ್ಮ ವ್ಯವಹಾರಗಳನ್ನು ವಿಸ್ತರಿಸುತ್ತಿದೆ ಎಂದು ಪ್ರಸಂಶೆ ವ್ಯಕ್ತಪಡಿಸಿದೆ.

ಸ್ಕೇಲಿಂಗ್ ನ್ಯೂ ಹೈಟ್ಸ್ ಎಂದು ಮುಖಪುಟದಲ್ಲಿ ಡಾ.ತುಂಬೆ ಮೊಯ್ಡೀನ್ ಅವರ ಭಾವಚಿತ್ರ ಪ್ರಕಟಿಸಿರುವ ಅರೆಬಿಯನ್ ಬಿಸಿನೆಸ್ ಸಾಪ್ತಾಹಿತ ಪತ್ರಿಕೆಯು ಇಜಿಪ್ಟ್ ನಿಂದ ಘಾನಾ ತನಕ, ಭಾರತದಿಂದ ಕೊಲ್ಲಿ ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ಪ್ರಪಂಚವನ್ನು ವಿಸ್ತರಿಸುತ್ತಿದೆ ಎಂದು ಹೇಳಿದೆ.

ತುಂಬೆ ಗ್ರೂಪ್: ಐ ಆನ್ ದ ಗ್ಲೋಬ್ ಎಂಬ ಶೀರ್ಷಿಕೆಯಲ್ಲಿ ಮುಖಪುಟ ಲೇಖನ ಪ್ರಕಟಿಸಿರುವ ಅರೆಬಿಯನ್ ಬಿಸಿನೆಸ್ ಪತ್ರಿಕೆಯು ಜಾಗತಿಕ ವ್ಯವಹಾರದ ಮುಂದಿನ ಹಂತದಲ್ಲಿ ತುಂಬೆ ಗ್ರೂಪ್ ಪಶ್ಚಿಮ ಆಫ್ರಿಕಾ ಮತ್ತು ಯುರೋಪಿನ ದಕ್ಷಿಣ ಪೂರ್ವ ದೇಶ ಬಲ್ಕಾನ್ ರಾಷ್ಟ್ರದಲ್ಲಿ ಕೂಡ ತಮ್ಮ ವ್ಯವಹಾರಕ್ಕಾಗಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ತುಂಬೆ ಗ್ರೂಪ್‌ನ ಆರಂಭ ಒಂದು ಅದ್ಭುತ ಕಥನವಾಗಿದೆ. 1997ರಲ್ಲಿ ತುಂಬೆ ಉದ್ಯಮ ಮನೆತನದ ಮೂರನೇ ತಲೆಮಾರಿನ ಡಾ.ತುಂಬೆ ಮೊಯ್ದೀನ್ ಅವರಿಗೆ ಆಫ್ರಿಕದಿಂದ ದುಬೈನಲ್ಲಿ ಪ್ರಯಾಣ ಸಂದರ್ಭದಲ್ಲಿ ಅಜ್ಮಾನ್‌ನ ರಾಜಮನೆತನದ ಶೇಖ್ ಹುಮೈದ್ ಬಿನ್ ರಶೀದ್ ಜೊತೆಯಾಗಿದ್ದರು. ಆ ಮೊದಲ ಭೇಟಿಯಲ್ಲಿ ಡಾ.ಮೊಯ್ಗೀನ್ ಅವರನ್ನು ಮಾತುಕತೆಗಾಗಿ ಆಹ್ವಾನಿಸಿ ಅಜ್ಮಾನ್‌ನಲ್ಲಿ ವೈದ್ಯಕೀಯ ಸೇವೆಗಳ ಕುರಿತು ಡಾ.ತುಂಬೆಯವರ ಮುಂದೆ ಪ್ರಸ್ತಾಪ ಇರಿಸಿದ್ದರು. ಅಲ್ಲಿಂದೀಚೆಗೆ ಡಾ.ತುಂಬೆಯವರು ಹಿಂದಿರುಗಿ ನೋಡಿದ್ದೇ ಇಲ್ಲ. ಕೊಲ್ಲಿ ರಾಷ್ಟ್ರದಲ್ಲಿ ಮೊದಲ ಬಾರಿಗೆ ಖಾಸಗಿ ಮೆಡಿಕಲ್ ಕಾಲೇಜು ಆರಂಭವಾಗಿದ್ದು ಹಾಗೆ.

ತುಂಬೆ ಗ್ರೂಪ್‌ನ ಆರಂಭ ಒಂದು ಅದ್ಭುತ ಕಥನವಾಗಿದೆ. ಹಿಂದೊಮ್ಮೆ ಡಾ.ತುಂಬೆ ಮೊಯ್ದೀನ್ ಅವರಿಗೆ ದುಬೈನಲ್ಲಿ ಪ್ರಯಾಣ ಸಂದರ್ಭದಲ್ಲಿ ಅಜ್ಮಾನ್‌ನ ರಾಜಮನೆತನದ ಸದಸ್ಯರೋರ್ವರು ಜೊತೆಯಾಗಿದ್ದರು. ಅಜ್ಮಾನ್‌ನಲ್ಲಿ ವೈದ್ಯಕೀಯ ಸೇವೆಗಳ ಕುರಿತು ಡಾ.ತುಂಬೆಯವರ ವಿವೇಚನಾಪೂರ್ಣ ಮಾತುಗಳು ಅವರ ಮೂಲಕ ಅಜ್ಮಾನ್‌ನ ಆಡಳಿತಗಾರರನ್ನು ತಲುಪಿದ್ದವು. ಅಲ್ಲಿಂದೀಚೆಗೆ ಡಾ.ತುಂಬೆಯವರು ಹಿಂದಿರುಗಿ ನೋಡಿದ್ದೇ ಇಲ್ಲ.

ತುಂಬೆ ಶೈಕ್ಷಣಿಕ ಆಸ್ಪತ್ರೆ ಜಾಲವು 2022ರ ವೇಳೆಗೆ ಯುಎಇಯಲ್ಲಿ ಒಟ್ಟು 1000, ಭಾರತದಲ್ಲಿ 1500 ಮತ್ತು ಕೊಲ್ಲಿಯ ಇತರ ಕಡೆಗಳಲ್ಲಿ ಮತ್ತು ಆಫ್ರಿಕಾದಲ್ಲಿ 750 ಹಾಸಿಗೆಗಳ ಆಸ್ಪತ್ರೆಗಳು ಹಾಗೂ ಜೊತೆಗೆ ವಿವಿಧ ದೇಶಗಳಲ್ಲಿ ಮೂರು ನೂತನ ವಿವಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲಿದೆ. ತುಂಬೆ ಗ್ರೂಪಿನ ಉದ್ಯೋಗಿಗಳ ಸಂಖ್ಯೆ ಈಗಿರುವ 20 ಸಾವಿರದಿಂದ 25 ಸಾವಿರಕ್ಕೆ ಏರಲಿದೆ.

ಭಾರತ ಮೂಲದ ಉದ್ಯಮಿಯಬ್ಬರು ಜಾಗತಿಕವಾಗಿ ಉದ್ಯಮದಲ್ಲಿ ಯಶಸ್ವಿಯಾಗಿರುವ ವಿಚಾರವನ್ನು ಅರೆಬಿಯನ್ ಬಿಸಿನೆಸ್ ಗಮನಿಸಿ ಮುಖಪುಟ ಲೇಖನ ಪ್ರಕಟಿಸಿದರುವುದು ಡಾ.ತುಂಬೆ ಮತ್ತವರ ತಾಯ್ನಾಡಿಗೆ ನೀಡಿರುವ ಗೌರವೇ ಸರಿ.

Be the first to comment

Leave a Reply

Your email address will not be published.


*