ಶೀತಲ್ ಟ್ರಾವೆಲ್ಸ್ ಲಕ್ಸೂರಿ ಬಸ್ಸಿನ ಅಪಘಾತ

ಮುಂಬೈನಿಂದ ಮಂಗಳೂರಿಗೆ ಹೊರಟ ಶೀತಲ್ ಟ್ರಾವೆಲ್ಸ್ ಕಂಪೆನಿಯ ಲಕ್ಸೂರಿ ಬಸ್ಸು ಗುರುವಾರ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಾಗಿ ಚಲಾಯಿಸಿದ್ದರಿಂದ ನಿಪ್ಪಾಣಿ ಗೇಟಿನ ಬಳಿ ಕಾರು ಹಾಗೂ ಲಾರಿಗೆ ಡಿಕ್ಕಿ ಹೊಡೆದಿದ್ದು, ಈ ಟಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು,ಬಸ್ಸಿನ ಕ್ಲೀನರ್ ಲಕ್ಷ್ಮಣ್ ಎಂಬವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.ಇದೇ ಶೀತಲ್ ಟ್ರಾವೆಲ್ಸ್ ಕಂಪೆನಿಯ ಬಸ್ಸು ಸುಮಾರು 2 ತಿಂಗಳ ಹಿಂದೆ ಇದೇ ರೀತಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಕಿನ್ನಿ ಟೋಲ್ ಪ್ಲಾಸದ ಬಳಿ ಬಸ್ಸು ಪಲ್ಟಿ ಹೊಡೆದು ಪ್ರಯಾಣಿಕರು ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.ಇದೀಗ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದ ಈ ಶೀತಲ್ ಟ್ರಾವೆಲ್ಸ್ ಬಸ್ಸಿನ ಚಾಲಕರ ಬಳಿ ಈ ರೀತಿ ಯಾಕೆ ಅತೀ ವೇಗವಾಗಿ ಚಲಾಯಿಸುತ್ತೀರಿ ಎಂದು ವಿಚಾರಿಸಿದಾಗ ಅವರು ನೋವಿನಿಂದ ಹೇಳಿದ ಮಾತು ‘ನಮ್ಮ ಮಾಲಕ ಶ್ರೀಕಾಂತ್‍ರಾವ್ ರವರು ಹೇಳುತ್ತಾರೆ ಮಂಗಳೂರಿನ ಏಲ್ಲಾ ಲಕ್ಸೂರಿ ಬಸ್ಸಿಗಿಂತ ನಮ್ಮ ಬಸ್ಸು ಮುಂದೆ ಬರಬೇಕು.ನಮ್ಮ ಬಸ್ಸಿನಲ್ಲಿರುವ ಬಿಲ್ಲು ರಹಿತ ಪಾರ್ಸೆಲ್ ಗಳನ್ನು ಎಲ್ಲಾ ಬಸ್ಸಿನವರಿಗಿಂತ ಮೊದಲು ನಾವು ಮುಟ್ಟಿಸಬೇಕು ಎಂದು ತಾಕೀತು ಹಾಕುತ್ತಾರೆ.ಒಂದು ವೇಳೆ ನಿಧಾನವಾಗಿ ಚಲಾಯಿಸಿದರೆ ನಮಗೆ ಮರುದಿನ ಕೆಲಸ ಕೊಡುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ನಮಗೆ ಈ ರೀತಿ ಅತೀ ವೇಗವಾಗಿ ಚಲಾಯಿಸಬೇಕಾಗುತ್ತದೆ.ಪ್ರಯಾಣಿಕರ ರಕ್ಷಣೆಯನ್ನು ನೋಡಲು ಸಾದ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ತನ್ನ ಸ್ವಾರ್ಥಕ್ಕಾಗಿ ಪ್ರಯಾಣಿಕರ ಅತ್ಯಮೂಲ್ಯವಾದ ಜೀವದ ಮೇಲೆ ಆಟವಾಡುವ ಈ ಶೀತಲ್ ಟ್ರಾವೆಲ್ಸ್ ಕಂಪೆನಿಯ ಮಾಲಕ ಶ್ರೀಕಾಂತ ರಾವ್ ರವರು ಇದೇ ರೀತಿ ಮುಂದುವರಿದರೆ ಶೀತಲ್ ಟ್ರಾವೆಲ್ಸ್ ಬಸ್ಸಿನಲ್ಲಿ ಪ್ರಯಾಣಿಸಲು ಪ್ರಯಾಣಿಕರು ಬಹಿಸ್ಕಾರ ಹಾಕಬೇಕಾಗುತ್ತದೆ.ಇನ್ನು ಇದೊಂದೆ ಉಳಿದಿರುವ ಮಾರ್ಗ. ಈ ಬಗ್ಗೆ ಸಂಬಂದ ಪಟ್ಟ ಅಧಿಕಾರಿಗಳು ಗಮನಹರಿಸಿ ಕಠಿಣ ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ವಿನಂತಿಸಲಾಗಿದೆ.

1 Comment

  1. End report mare. Hats off nimge. Yaraddadrru mana tegilike nivugale saku. WhatsApp suddigalannu nambi report madtiralla bere kelsa illva nimge.

Leave a Reply

Your email address will not be published.


*