ಮೂಡುಬಿದಿರೆ : ಸಿಡಿಲು ಬಡಿದು ಜಾನುವಾರುಗಳು ಸಾವು

ಮೂಡುಬಿದಿರೆ, ಸೆ. 28: ಸಿಡಿಲು ಬಡಿದು ಒಟ್ಟು ನಾಲ್ಕು ದನಗಳು ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮಾರ್ನಾಡಿನ ತಂಡ್ರಕೆರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸುಜಾತ ಎಂಬರಿಗೆ ಸೇರಿದ ಮೂರು ಮತ್ತು ಸುಧಾಕರ ಎಂಬರಿಗೆ ಸೇರಿದ ದನಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದೆ. ಈ ಹಸುಗಳು ಮನೆಯ ಸಮೀಪದ ಗುಡ್ಡದಲ್ಲಿ ಮೇಯುತಿದ್ದು, ಈ ಸಂದರ್ಭ ಸಿಡಿಲು ಮರಕ್ಕೆ ಬಡಿದಿದ್ದು, ಸಿಡಿಲಿನ ಆಘಾತಕ್ಕೆ ದನಗಳು ಪ್ರಾಣ ಕಳೆದುಕೊಂಡಿವೆ.

ಘಟನಾ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷ ಶ್ರೀನಾಥ್ ಎಸ್.ಸುವರ್ಣ ಭೇಟಿ ನೀಡಿದ್ದಾರೆ.

Be the first to comment

Leave a Reply

Your email address will not be published.


*