ಎಸ್ಸೆಸ್ಸೆಫ್ ಅರಬನ ವಳವೂರು: ಸುನ್ನೀ ಸೆಂಟರ್ ಉದ್ಘಾಟನೆ, ಮಾಸಿಕ ‘ಮಹ್ಳರತುಲ್ ಬದ್ರಿಯಾ’ ಕಾರ್ಯಕ್ರಮ

ಬಂಟ್ವಾಳ,ಸೆ.28: ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ ನೂತನ ಸುನ್ನೀ ಸೆಂಟರ್ ಉದ್ಘಾಟನೆ ಮತ್ತು ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮ ಇಂದು ಮಗ್ರಿಬ್ ನಮಾಝ್ ನ ನಂತರ ನಡೆಯಿತು.

ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆ ಇದರ ನೂತನ ಸುನ್ನೀ ಸೆಂಟರ್ ಉದ್ಘಾಟನೆಯನ್ನು ದಾರುಲ್ ಇರ್ಶಾದ್ ಮಾಣಿ ಸಂಸ್ಥೆಯ ರೂವಾರಿ ಝೈನುಲ್ ಉಲಮಾ ಮಾಣಿ ಉಸ್ತಾದ್ ನೆರವೇರಿಸಿದರು.

ನಂತರ ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮವು ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾದ ವಳವೂರು ಉಸ್ತಾದ್ ರವರ ನೇತೃತ್ವದಲ್ಲಿ ನಡೆಯಿತು. ಪ್ರಸ್ತುತ ಆತ್ಮೀಯ ಸಂಗಮಕ್ಕೆ ವಳವೂರು ಜಮಾಅತ್ ಖತೀಬ್ ಅಬೂಬಕ್ಕರ್ ಸಅದಿ ಉಸ್ತಾದ್ ಊರಿನ ಹಿರಿಯ ಉಲಮಾ ನೇತಾರ ಅಕ್ಕರಂಗಡಿ ಉಸ್ತಾದ್ ಹಾಗೂ ಊರಿನ ಸುನ್ನೀ ಉಲಮಾ-ಉಮರಾ ನೇತಾರರು, ಸುನ್ನೀ ಯುವ ಕಾರ್ಯಕರ್ತರು ಹಾಜರಿದ್ದರು.

Be the first to comment

Leave a Reply

Your email address will not be published.


*