ಸಚಿವ ಯು.ಟಿ.ಖಾದರ್ ರವರಿಗೆ ಸನ್ಮಾನ  ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ

ವಾಸ್ತು ಶಿಲ್ಪಿಗಳ ಮೂಲಕವಾಗಿ ಮಂಗಳೂರಿನ ಚೆಲುವು ಉನ್ನತ ಮಟ್ಟಕ್ಕೇರಿದ್ದು,ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
‘ದಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್-ಮಂಗಳೂರು,ಮಣಿಪಾಲ ಸೆಂಟರ್’ ವತಿಯಿಂದ ನಗರದಲ್ಲಿ ನಡೆದ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮನಪಾ ಆಯುಕ್ತ ಮಹಮ್ಮದ್ ನಝೀರ್,ಮೂಡ ಆಯುಕ್ತ ಶ್ರೀಕಾಂತ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
‘ದಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್-ಮಂಗಳೂರು,ಮಣಿಪಾಲ ಸೆಂಟರ್’ ಅಧ್ಯಕ್ಷ ಕುಮಾರಚಂದ್ರ ಎಂ.ಆರ್,ಕೋಶಾಧಿಕಾರಿ ವೆಂಕಟೇಶ್ ಪೈ,ಪ್ರಮುಖರಾದ ಸುಪ್ರಿತ್ ಆಳ್ವ,ಸುನಿಲ್ ತಾಳಿತ್ತಾಯ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*