ಕೈಗಾಡಿ ಎಳೆದು ರಸ್ತೆ ಉದ್ಘಾಟನೆ- ಶ್ರೀ ಅಬ್ದುಲ್ ಲತೀಫ್

ಮಂಗಳೂರು: 45ನೇ ಪೋರ್ಟ್ ವಾರ್ಡಿನ ಹಳೇ ಬಂದರು ಮತ್ತು ಬಾಂಬು ಬಜಾರ್ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಹಳೆ ಬಂದರಿನ ಸಗಟು ಮಾರುಕಟ್ಚೆಯ ಹಮಾಲಿ ಕಾರ್ಮಿಕರು ಕೈಗಾಡಿ ಎಳೆಯುವ ಮೂಲಕ ವಿನೂತನ ಶೈಲಿಯಲ್ಲಿ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ನಗರ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಇಸ್ಮಾಯಿಲ್, ಇಂಡಿಯನ್ ಒವರ್ಸೀಸ್ ಬ್ಯಾಂಕ್ ಬಂದರು ಶಾಖೆಯ ಪ್ರಬಂಧಕರಾದ ಸುರೇದ್ರನ್, ಟೆಂಪೋ ಚಾಲಕರ ಅಧ್ಯಕ್ಷರಾದ ದೇವೇಂದ್ರ ಪೂಜಾರಿ, ರಿಕ್ಷಾ ಚಾಲಕರ ಅಧ್ಯಕ್ಷರಾದ ಗುರುದತ್ ನಾಯಕ್, ಡಿವೈಎಫ್ಐ ಜಿಲ್ಲಾಧ್ಯಕ್ಷ ಮತ್ತು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಇಮ್ತಿಯಾಜ್, ಬಂದರು ಶ್ರಮಿಕ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಒಣಮೀನು ವ್ಯಾಪಾರದ ಕಾರ್ಯದರ್ಶಿ ಯಾದ ಎಂ.ಸಾಲಿ, ಆದಿಶಕ್ತಿ ಪಾರ್ಸೆಲ್ ಮಾಲಕರಾದ ಸುಧಾಕರ್, ಪೋರ್ಟ್ ವಾರ್ಡ್ ಅಧ್ಯಕ್ಷರಾದ ಸುಧಾಕರ್ ಶೆಣೈ, ವರ್ತಕರ ಸಂಘದ ಅಬ್ಬಾಸ್ ಹಾಜಿ, ಸ್ಥಳೀಯಾರಾದ ಸಿದ್ದೀಕ್, ಫೈಜಲ್, ನಿಸಾರ್, ಮುಸ್ತಫ, ಜಯರಾಂ, ಹರೀಶ್, ಇಕ್ಬಾಲ್ ಬಿ.ಎಸ್, ಸತ್ತಾರ್, ತೌಸೀಫ್, ಹರೀಶ್ ಕೆರೆಬೈಲ್,ಹಸನ್ ಮೋನು, ಮೊಹಮ್ಮದ್ ಮೋನು ರೆಹಮತ್ ಅಲಿ, ಯಸುಫ್, ಅರುಣ್ ಡಿಸೋಜ, ರೂಡಿ ಪಿಂಟೋ, ಜೆರಾಲ್ಡ್,  ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*