‘ಕಂಬಳಬೆಟ್ಟು ಭಟ್ರೆನ ಮಗಲ್’ ಆಡಿಯೊ ರಿಲೀಸ್ ಮಾಡಿದ ಸಚಿವ ಯು.ಟಿ.ಖಾದರ್

ಮಂಗಳೂರುಃ ಮತ್ತೊಂದು ಹೊಸ ತುಳು ಸಿನಿಮಾ’ಕಂಬಳಬೆಟ್ಟು ಭಟ್ರೆನ ಮಗಲ್’ ಆಡಿಯೊ ಬಿಡುಗಡೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮಾಡಿದರು. ಅವರೊಂದಿಗೆ ಹಿರಿಯ ಉದ್ಯಮಿ ಏ.ಜೆ.ಶೆಟ್ಟಿ, ಸಂಘಟಕ ಹರಿಕೃಷ್ಣ ಪುನರೂರು ಮತ್ತಿತರರು ಕೈಜೋಡಿಸಿದರು.

‘ಕಂಬಳಬೆಟ್ಟು ಭಟ್ರೆನ ಮಗಲ್’ ಆಡಿಯೊ ರಿಲೀಸ್ ಕಾರ್ಯಕ್ರಮ ಸೆ.2ರಂದು ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

 

ತುಳುನಾಡ ಪೆರ್ಮೆದ ಪೊಣ್ಣು ‘ಕಂಬಳಬೆಟ್ಟು ಭಟ್ರೆನ ಮಗಲ್’ ಚಿತ್ರವನ್ನು ರಾಚೆಲ್ ಫಿಲ್ಮ್ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ಈ ಚಿತ್ರದ ನಿರ್ಮಾಪಕ ರೊನಾಲ್ಡ್ ಮಾರ್ಟಿಸ್.

ಶರತ್ ಎಸ್ ಪೂಜಾರಿ ಚಿತ್ರಕಥೆ ನಿರ್ದೇಶನ ಮಾಡಿದ್ದು, ವಾಲ್ಟರ್ ಮಾರ್ಟಿಸ್, ಪ್ರಕಾಶ್ ಗಟ್ಟಿ, ಶಂಕರ್ ಭಟ್, ಶಿನಾಯ್ ಜೋಸೆಫ್ , ವಿಜಯ್ ಕ್ರಾಸ್ತಾ, ಎಲ್ಡೋಸ್ ಪಿ ವಿ, ಯೋಗೀಶ್ ಉಪ್ಪೂರ್, ಸಂತೋಷ್ ಶೆಟ್ಟಿ ಕಟೀಲ್, ಬಸಂತ ಕುಮಾರ್, ರವಿರಾಜ್, ರಾಘವೇಂದ್ರ ಬಿ, ವಿಭುಶಂಕರ್ ಚಿತ್ರ ತಂಡದಲ್ಲಿದ್ದಾರೆ.

 

Be the first to comment

Leave a Reply

Your email address will not be published.


*