ಸದ್ಯದಲ್ಲೇ ತೆರೆಗೆಬರಲಿದೆ `ಮನೆ ನಂ 67′ ಚಿತ್ರ

ರೋಶನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಗಣೇಶ್ ಅವರು ನಿರ್ಮಿಸಿರುವ `ಮನೆ ನಂ 67` ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಹಾಸ್ಯ, ಹಾರಾರ್, ಥ್ರಿಲ್ಲರ್ ಕಥೆ ಆಧಾರಿತ ಈ ಚಿತ್ರವನ್ನು ಜೈಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಆನೇಕಲ್‍ನಲ್ಲಿ 25ದಿನಗಳ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ಹರ್ಷ ಸಂಗೀತ ನೀಡಿದ್ದಾರೆ. ಸುದೀಪ್ ಛಾಯಾಗ್ರಹಣ, ಸತೀಶ್ ಸಂಕಲನ, ಗೌರೀಶ್ ನೃತ್ಯ ನಿರ್ದೇಶನ ಹಾಗೂ ಸುರೆಶ್ ಸಹ ನಿರ್ದೇಶನ ಈ ಚಿತ್ರಕ್ಕಿದೆ. ತೇಜು ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಕೃಷ್ಣದಾಸ್ ಸಂಭಾಷಣೆ ಬರೆದಿದ್ದಾರೆ.

ಸತ್ಯಜಿತ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ ವಸಂತಿ, ಸ್ವಪ್ನ, ಗಾಯತ್ರಿ, ಸುಮಿತ್ರ, ದೊಂಬರ ಕೃಷ್ಣ, ಸುರೇಶ್, ಉಮಾಶಂಕರ್, ಜ್ಯೋತಿ, ಅನುಪಮ ಮುಂತಾದವರಿದ್ದಾರೆ.

Be the first to comment

Leave a Reply

Your email address will not be published.


*