ಅಪ್ರತಿಮ ಚಾಣಾಕ್ಯ ಸಚಿವ ಯು.ಟಿ. ಖಾದರ್

ಮಂಗಳೂರು: ರಾಜಕೀಯ ರಂಗದಲ್ಲಿ ಚಾಣಾಕ್ಯ ತಂತ್ರಗಳನ್ನು ಕರಗತ ಮಾಡಿಕೊಳ್ಳುವುದು ರಾಜಕೀಯ ಮುಖಂಡರ ವಿಶೇಷ ಅರ್ಹತೆ. ಸಾಮಾನ್ಯವಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಚಾಣಾಕ್ಯ ಎಂದು ಕರೆಯಲಾಗುತ್ತದೆ. ಆದರೆ,ನಮ್ಮೊಂದಿಗೆ ಇರುವ ಅಪ್ರತಿಮೆ ಚಾಣಾಕ್ಯ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಎಂಬುದು ಬಹುಮಂದಿಗೆ ಗೊತ್ತಿಲ್ಲ.
ಯು.ಟಿ.ಖಾದರ್ ಅವರ ರಾಜಕೀಯ ಚಾಣಾಕ್ಷತನವನ್ನು ಗಮನಿಸಿಯೇ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಖಾದರ್ ಮುಂದೊಂದು ದಿನ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಿದ್ದರು.
ಈಗಾಗಲೇ ಮೂರು ಇಲಾಖೆಗಳನ್ನು ನಿಭಾಯಿಸಿ ಅನುಭವ ಹೊಂದಿರುವ ಖಾದರ್ ಅವರು ಐಎಎಸ್ ಅಧಿಕಾರಿಗಳನ್ನು ಕೆಲಸ ಮಾಡಿಸುವಲ್ಲಿ ಕೂಡ ಸಫಲರಾಗಿದ್ದಾರೆ.ಸರಕಾರದ ಕಾರ್ಯಕ್ರಮಗಳು ಜನರ ಹತ್ತಿರಕ್ಕೆ ಕೊಂಡೊಯ್ಯುವಂತೆ ನೀತಿಗಳನ್ನು ರೂಪಿಸುವಲ್ಲಿ ಸಚಿವ ಯು.ಟಿ.ಖಾದರ್ ಸಫಲರಾಗಿದ್ದರೆ ಇದರ ಹಿಂದೆ ಅವರ ಚಾಣಾಕ್ಯ ಬುದ್ದಿ ಕೆಲಸ ಮಾಡಿದೆ.
ಸರಕಾರಿ ಅಧಿಕಾರಿಗಳಿಗೆ ಕೆಲಸ ಮಾಡಿಸುವುದು ಕುದುರೆಗೆ ನೀರು ಕುಡಿಸುವುದು ಒಂದೇ ರೀತಿ.ಆದರೆ ಸಚಿವ ಖಾದರ್ ಅವರು ಇಂತಹ ಅಧಿಕಾರಿಗಳನ್ನು ಮಣಿಸುತ್ತಾರೆ.
ಅದೇ ರೀತಿಯಲ್ಲಿ ಮಾಧ್ಯಮದವರೊಂದಿಗೆ ವ್ಯವಹರಿಸುವಾಗ,ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೂಡ ತನ್ನ ವಿಶೇಷ ಜಾಣ್ಮೆಯನ್ನು ಸಚಿವ ಖಾದರ್ ಉಪಯೋಗಿಸುತ್ತಾರೆ.
ಸಮಾಜದಲ್ಲಿ ಅನೇಕ ವ್ಯವಹಾರಗಳನ್ನು ನಡೆಸುವವರು ಇದ್ದಾರೆ.ಇಂತಹ ಮಂದಿ ಕೂಡ ಸಚಿವರನ್ನು ಭೇಟಿಯಾಗಿ ದೂರುಗಳನ್ನು ನೀಡಿದಾಗ ಸಂದಿಗ್ಧ ಪರಿಸ್ಥಿತಿಗಳನ್ನು ಸಚಿವ ಖಾದರ್ ಚಾಣಾಕ್ಷ ಬುದ್ಧಿ ಜಾಗೃತ ಆಗುತ್ತದೆ.ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ ಬೆಣ್ಣೆಯಿಂದ ಕೂದಲನ್ನು ಹೊರತೆಗೆಯುವಂತೆ ಸಚಿವ ಯು.ಟಿ. ಖಾದರ್ ಪರಿಸ್ಥಿತಿಯನ್ನು ನಿಭಾಯಿಸಿ ಮೇಲುಗೈ ಪಡೆಯುತ್ತಾರೆ.
ಸದಾ ಜನರಪರವಾಗಿ ಚಿಂತಿಸುವ ಜನಸಾಮಾನ್ಯರಿಗೆ ತೊಂದರೆ ಆಗದಂತೆ,  ಅಭಿವೃದ್ಧಿಯೂ ಆಗುವಂತೆ ಆಸಕ್ತಿ ವಹಿಸುವ ನಮ್ಮೊಂದಿಗಿನ ನಿಜವಾದ ಚಾಣಾಕ್ಯ ಯು.ಟಿ.ಖಾದರ್.

1 Comment

Leave a Reply

Your email address will not be published.


*