ಬೆಲ್ಜಿಯಂ, ಬ್ರಜಿಲ್, ರಶ್ಯ, ಕ್ರೊಯೇಶಿಯಾ ಕ್ವಾರ್ಟರ್ ಫೈನಲಿಗೆ

ಮಾಸ್ಕೋ : ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಿದ್ದಾ ಜಿದ್ದಿನ ಹೋರಾಟಗಳು ನಡೆಯುತ್ತಿದ್ದು ಕ್ವಾರ್ಟರ್ ಫೈನಲ್ ಗೆ ಎಂಟ್ರಿ ಕೊಡಲು ತಂಡಗಳು ಕಸರತ್ತು ನಡೆಸಿವೆ.
ನಿನ್ನೆ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಮಣಿಸಿದ ಬೆಲ್ಜಿಯಂ ಕ್ವಾರ್ಟರ್ ಫೈನಲ್ ಗೆ ಪ್ರವೇಶಿಸಿದೆ. ಉಭಯ ತಂಡಗಳು ತಲಾ ಎರಡು ಗೋಲುಗಳಿಂದ ಸಮಬಲ ಸಾಧಿಸಿದ್ದವು. ಈ ವೇಳೆ ಪಂದ್ಯ ಡ್ರಾನಲ್ಲಿ ಅಂತ್ಯವಾಗಲಿದೆ ಎಂದ ಊಹಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ನಸಿರ್ ಚಡ್ಲಿ ಗೋಲು ಬಾರಿಸಿದರು.
ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16 ರ ಘಟ್ಟದಲ್ಲಿ ಮೆಕ್ಸಿಕೊ ವಿರುದ್ಧ 2-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಬ್ರಜಿಲ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಫಿಫಾ ವಿಶ್ವ ಫುಟ್ಬಾಲ್ ಟೂರ್ನಿಯಲ್ಲಿ ನಿನ್ನೆ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಗೆದ್ದಿರುವ ಕ್ರೊಯೇಶಿಯಾ ತಂಡ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಮಾಸ್ಕೋದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪುಟ್ಬಾಲ್ 16 ರ ಘಟ್ಟದ ಪಂದ್ಯದಲ್ಲಿ ಅತಿಥೇಯ ರಷ್ಯಾ 4-3 ಪೆನಾಲ್ಟಿ ಮೂಲಕ ಸ್ಪೇನ್ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

Be the first to comment

Leave a Reply

Your email address will not be published.


*