ಕ್ರಿಸ್ಟಿಯಾನೋ ರೊನಾಲ್ಡೋ ಬಗ್ಗೆ ಲಿಯೋನಲ್ ಮೆಸ್ಸಿ ಹೇಳಿದ್ದೇನು

 

ಮಾಸ್ಕೋ : ರಷ್ಯಾದಲ್ಲಿ ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯುತ್ತಿದ್ದು, ಪೋರ್ಚುಗಲ್ ಮತ್ತು ಅರ್ಜೆಂಟಿನಾ ಟೂರ್ನಿಯಿಂದ ಹೊರಬಿದ್ದಿವೆ. ಈ ಮಧ್ಯೆ ಫುಟ್ಬಾಲ್ ವಲಯದಲ್ಲಿ ಮತ್ತೆ ನಂಬರ್ ಫುಟ್ಬಾಲ್ ಆಟಗಾರ ಯಾರು ಎಂಬ ವಿಚಾರದ ಕುರಿತು ಚರ್ಚೆ ನಡೆದಿದೆ.

ಏತನ್ಮಧ್ಯೆ ಫುಟ್ಬಾಲ್ ಕ್ಷೇತ್ರದ ಅತ್ಯುತ್ತಮ ಆಟಗಾರ ಯಾರು ಎಂಬ ವಿಚಾರದ ಅರ್ಜೆಂಟೀನಾ ತಂಡದ ಪ್ರಮುಖ ಆಟಗಾರ ಲಿಯೋನಲ್ ಮೆಸ್ಸಿ ಹೇಳಿರುವು ಅಂಶಗಳು ಇದೀಗ ಸಾಮಾಜಿಕ ಜಾಲತಾಣಗಳ್ಲಿ ಭಾರಿ ವೈರಲ್ ಆಗುತ್ತಿದೆ. ಈ ಸಂದರ್ಶನ 2017ರ ಜೂನ್ ತಿಂಗಳನಿದ್ದೇ ಆದರೂ ಫೀಫಾ ವಿಶ್ವಕಪ್ ಫುಟ್ಬಾಲ್ ನಿಮಿತ್ತ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ ಪೋರ್ಚುಗಲ್ ತಂಡದ ಕ್ರಿಸ್ಟಿಯಾನೋ ರೊನಾಲ್ಡೋ ಎಂದು  ಸಂದರ್ಶಕನ ಪ್ರಶ್ನೆಗೆ ಉತ್ತರಿಸಿರುವ ಮೆಸ್ಸಿ ಹೇಳಿದ್ದಾರೆ. ವಿಡಿಯೋದ ಉದ್ದಕ್ಕೂ ರೊನಾಲ್ಡೋ ಸಾಮರ್ಥ್ಯ ಮತ್ತು ಆಟದ ಶೈಲಿಯನ್ನು ವಿಶ್ಲೇಷಣೆ ಮಾಡಿರುವ ಮೆಸ್ಸಿ, ಅವರ ಸಾಧನೆಗಳ ಸಮೀಪಕ್ಕೂ ಮತ್ತೊಬ್ಬರು ಹೋಗಲು ಸಾಧ್ಯವಿಲ್ಲ ಎಂದಿದ್ದಾರೆ.
‘ನಾನು ಕಂಡಂತೆ ಕ್ರಿಸ್ಟಿಯಾನೋ ರೊನಾಲ್ಡೋ ವಿಶ್ವದ ಅತ್ಯುತ್ತಮ ಫುಟ್ಬಾಲ್ ಆಟಗಾರ. ಆತನ ಫುಟ್ ವರ್ಕ್, ಶೈಲಿ, ಮತ್ತು ಗೋಲ್ ಬಾರಿಸುವ ರೀತಿ ಅಚ್ಚರಿಯಾಗುತ್ತದೆ. ಭವಿಷ್ಯದ ಫುಟ್ಬಾಲಿಗರಿಗೆ ರೊನಾಲ್ಡೋ ಖಂಡಿತಾ ಮಾದರಿ ಆಟಗಾರ. ಪ್ರಮುಖವಾಗಿ ಆತನ ಚಾಕಚಕ್ಯತೆ, ಚೆಂಡು ಎದುರಾಳಿಗಳಿಗೆ ಸಿಗದಂತೆ ಕೊಂಡೊಯ್ಯುವ ಗೇಮ್ ಪ್ಲಾನ್ ಅದ್ಭುತವಾಗಿರುತ್ತದೆ. ಈ ಹಿಂಗೆ ಬಲ್ಗೇರಿಯಾ ತಂಡದ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೋ ಮಾಡಿದ್ದ ಹೆಡ್ ಶಾಟ್ ನಿಜಕ್ಕೂ ನನ್ನ ಅಚ್ಚರಿಗೆ ಕಾರಣವಾಗಿತ್ತು.
ಸಾಮಾನ್ಯವಾಗಿ ಚೆಂಡು ಹೋದಂತೆ ಅದಕ್ಕೆ ಸರಿಸಮಾನವಾಗಿ ಫುಟ್ಬಾಲಿಗರು ಕಾಲ್ಚಲನೆ ಮಾಡುತ್ತಾರೆ. ಆದರೆ ರೊನಾಲ್ಡೋ ತಮ್ಮ ಕಾಲ್ಚಲನೆಗೆ ತಕ್ಕಂತೆ ಚೆಂಡನ್ನೇ ಹಿಡಿತಕ್ಕೆ ಪಡೆಯುತ್ತಾರೆ. ಅವರಂತಹ ಅದ್ಬುತ ಆಟಗಾರರನ್ನು ನಾನು ನೋಡಿಲ್ಲ ಎಂದು ಮೆಸ್ಸಿ ವಿಡಿಯೋ ಸಂದರ್ಶನದಲ್ಲಿ ಹೇಳಿದ್ದಾರೆ.
ಇನ್ನು ಫುಟ್ಬಾಲ್ ರಂಗದಲ್ಲಿ ಅರ್ಜೆಂಟೀನಾ ತಂಡದ ಲಿಯೋನಲ್ ಮೆಸ್ಸಿ ಮತ್ತು ಪೋರ್ಚುಗಲ್ ತಂಡದ ರೊನಾಲ್ಡೋ ಬದ್ಧ ಎದುರಾಳಿಗಳು ಎಂದೇ ಭಾವಿಸಲಾಗುತ್ತದೆ. ಈ ಇಬ್ಬರು ಪರಸ್ಪರ ಎದುರಾದರೆ ಮದಗಜಗಳು ಕಾದಾಡಿದಂತೆ ಪಂದ್ಯ ಕೂಡ ತೀವ್ರ ಕುತೂಹಲದಿಂದ ಕೂಡಿರುತ್ತದೆ. ಆದರೆ ಮೈದಾನದಲ್ಲಿ ಎಷ್ಟೇ ವಿರೋಧಿಗಳಾದರೂ ಮೈದಾನದಿಂದ ಹೊರಗೆ ಮೆಸ್ಸಿ ಮತ್ತು ರೊನಾಲ್ಡೋ ಆಪ್ತ ಸ್ನೇಹಿತರು ಎಂಬುದಕ್ಕೆ ಮೆಸ್ಸಿ ಸಂದರ್ಶನವೇ ಸಾಕ್ಷಿ.

 

Be the first to comment

Leave a Reply

Your email address will not be published.


*