ವಿದೇಶಿಯರ ಆಕರ್ಷಿಸಿದ ವಿಶ್ವವ್ಯಾಪಿ ಯೋಗ

 

ಮೂಲದ ಯೋಗಾಸನ ವಿದೇಶಿಯರನ್ನು ಆಕರ್ಷಿಸಿ ಹಲವು ದಶಕಗಳೇ ಕಳೆದು ಹೋಗಿವೆ. ಪ್ರವಾಸಿ ಕೇಂದ್ರಗಳಾದ ಮೈಸೂರು, ಹಂಪಿ ಮುಂತಾದೆಡೆ ವಿದೇಶಿರಿಗಾಗಿ ತರಬೇತಿ ನೀಡುವ ಹೈಟೆಕ್ ಯೋಗ ಕೇಂದ್ರಗಳಿವೆ.

ರಾಜ್ಯದ ಮೈಸೂರು, ಮಹಾರಾಷ್ಟ್ರದ ಪುಣೆ, ಉತ್ತರಖಂಡದ ರಿಷಿಕೇಶ ಇತ್ಯಾದಿ ಹೆಚ್ಚಾಗಿ ವಿದೇಶಿ ಪ್ರಾವಸಿಗರನ್ನು ಆಕರ್ಷಿಸುವ ಪ್ರವಾಸಿ ಕೇಂದ್ರಗಳು.

ಅಷ್ಟಾಂಗ ಯೋಗ, ನಿರ್ವಾಣ ಯೋಗ, ವೇದವ್ಯಾಸ ಯೋಗ ಹೀಗೆ ನಾನ ಹೆಸರುಗಳಿಂದ ವಿದೇಶಿಯರಿಗೆ ತರಬೇತಿ ನೀಡುವ ಯೋಗ ಕೇಂದ್ರಗಳು ಮೈಸೂರು ಮತ್ತು ವಿದೇಶಿಯರು ಆಗಮಿಸುವ ಸ್ಥಳಗಳಲ್ಲಿ ಬಿರುಸಿನ ವ್ಯವಹಾರ ನಡೆಸುತ್ತಿವೆ. ಅಕ್ಟೋಬರ್ ಮತ್ತು ಮಾರ್ಚ್ ನಡುವೆ ಸೀಸನ್ ಆಗಿದ್ದೂ ವರ್ಷ ಪೂರ್ತಿ ತರಬೇತಿ ನಡೆಸುತ್ತಿರುತ್ತದೆ. ಒಂದು ವಾರದ ಯೋಗ ತರಬೇತಿಗೆ 150 ಡಾಲರ್ ಶುಲ್ಕ ವಿಧಿಸಲಾಗುತ್ತದೆ.

ಯೋಗವನ್ನು ವಿಶ್ವದಲ್ಲಿ ಜನಪ್ರಿಯಗೊಳಿಸಿದ ಮಹನೀಯರೆಂದರೆ ಬಿ.ಕೆ.ಎಸ್.ಅಯ್ಯಂಗಾರ್, ಕೆ.ಪಟ್ಟಾಭಿ ಜೋಷಿ ಮುಂತಾದವರು. ಅನಂತರ ದಿನಗಳಲ್ಲಿ ಶಿಲ್ಪಾ ಶೆಟ್ಟಿ ಕೂಡ ಯೋಗವನ್ನು ತಕ್ಕ ಮಟ್ಟಿಗೆ ಪ್ರಚಾರ ಮಾಡಿದ್ದಾರೆ.

ಸೀಸನ್ ಕಾಲದಲ್ಲಿ ಮೈಸೂರಿನಂತಹ ಪ್ರವಾಸಿ ಕೇಂದ್ರ ಪ್ರತಿ ತಿಂಗಳು ಎರಡು ಸಾವಿರಕ್ಕಿಂತ ಹೆಚ್ಚು ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಲ್ಲಿ ಸಾಕಷ್ಟು ಸಂಖ್ಯೆಯ ವಿದೇಶಿಯರು ಯೋಗ ಕಲಿಯಲು ವಾರಕ್ಕೂ ಹೆಚ್ಚು ಕಾಲ ತಂಗುತ್ತಾರೆ.

 

ಯೋಗಾಶನಗಳಿಂದ ಮನಃಶಾಂತಿ ಸಿಗುತ್ತದೆ, ಏಕಾಗ್ರತೆ ವೃದ್ಧಿಸಿಕೊಳ್ಳಬಹುದು. ಒಳ್ಳೆಯ ಆಲೋಚನೆಗಳನ್ನು ಬೆಳೆಸಿಕೊಳ್ಳಬಹುದು ಹಾಗೆಯೇ ಪ್ರಾಣಯಾಮದಿಂದ ಆರೋಗ್ಯ ವೃದ್ಧಿಸುತ್ತದೆ ಎನ್ನುತ್ತಾರೆ ವಿದೇಶಿ ಯೋಗ ಅಭ್ಯಾಸ ಮಾಡುವವರು.

 

Be the first to comment

Leave a Reply

Your email address will not be published.


*