ಶಾಂತಿವನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್

 

ಉಜಿರೆ, ಧರ್ಮಸ್ಥಳಃ ಹನ್ನೆರಡು ದಿನಗಳ ಪ್ರಾಕೃತಿಕ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟು ನಿಟ್ಟಿನ ಪಥ್ಯಾಹಾರ ಮತ್ತು ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರಂತರ ರಾಜಕೀಯ ಚಟುವಟಿಕೆ ಮತ್ತು ಚುನಾವಣಾ ಪ್ರಚಾರ ಸಂಬಂಧ ಬಿಡುವಿಲ್ಲದ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ಜೂನ್ 14ರಿಂದ ಪ್ರಕೃತಿ ಚಿಕಿತ್ಸೆ ಮತ್ತು ರಿಲಾಕ್ಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿದ್ದರಾಮಯ್ಯ ಅವರನ್ನು ಸಚಿವ ಎಚ್.ಡಿ.ರೇವಣ್ಣ ಭೇಟಿಯಾದ ಬೆನ್ನಲ್ಲೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಶಾಂತಿವನದಲ್ಲಿ ರಮಾನಾಥ ರೈ ಅವರನ್ನು ಭೇಟಿಯಾದರು.

ಕಳೆದ ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ವಿಶ್ರಾಂತಿ ಪಡೆಯದೇ ರಾಜ್ಯದ ಮೂಲೆ ಮೂಲೆ ಸುತ್ತಿದ ಸಿದ್ದರಾಮಯ್ಯ ಶುಗರ್, ಹೆಚ್ಚಿನ ರಕ್ತದ ಒತ್ತಡ ಹೆಚ್ಚಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೇಹದಲ್ಲಿ ಹೆಚ್ಚಿರುವ ಟಾಕ್ಸಿಕ್ ಅಂಶ ಕಡಿಮೆ ಮಾಡಲು ಮತ್ತು ದೇಹದ ತೂಕ ಕಡಿಮೆ ಮಾಡಲು ಸಿದ್ದರಾಮಯ್ಯ ಪ್ರಾಕೃತಿಕ ಚಿಕಿತ್ಸೆಗೆ ಒಳಗಾಗಿದ್ದಾರೆ.

ಈಗ 69 ಹರೆಯದ ಸಿದ್ದರಾಮಯ್ಯ ಅವರಿಗೆ ಮಾಂಸಾಹಾರ ಸಂಪೂರ್ಣ ವರ್ಜ್ಯ. ಆಹಾರದಲ್ಲಿ ಕೂಡ ಉಪ್ಪು, ಹುಳಿ, ಖಾರ ಕೂಡ ಕಡಿಮೆ. ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ವಾರಕ್ಕೊಮ್ಮೆ ಮಾತ್ರ ಮಟನ್ ಸೇವಿಸುತ್ತಿದ್ದರು. ಸಾಮಾನ್ಯವಾಗಿ ಬೆಳಗ್ಗೆ ರಾಗಿ ಅಂಬಲಿ ಸೇವಿಸುವ ಸಿದ್ದರಾಮಯ್ಯ ಅವರಿಗೆ ದಿನದ ಮೂರು ಹೊತ್ತು ಮಟನ್ ಸೇವಿಸುವುದು ಇಷ್ಟವಾಗುತಿತ್ತು. ಕಳೆದ ಒಂದು ದಶಕದಿಂದ ಅವರು ಈ ಮಟನ್ ತಿನ್ನುವ ಅಭ್ಯಾಸ ನಿಲ್ಲಿಸಿದ್ದರು. ಆದರೆ, ಮೀನೂಟ ಇನ್ನೊಂದು ಇಷ್ಟ ಖಾದ್ಯ ಆಗಿತ್ತು. ಅದೇ ರೀತಿ ಯಾವುದೇ ಸಮಾರಂಭಗಳಲ್ಲಿ, ಔತಣಕೂಟಗಳಲ್ಲಿ ಅವರು ಇಂತಹ ಖಾದ್ಯಗಳನ್ನು ಸವಿಯದೇ ಇರುತ್ತಿರಲಿಲ್ಲ.

ಶಾಂತಿವನ ಚಿಕಿತ್ಸಾ ಕೇಂದ್ರದಲ್ಲಿ ಅವರ ದಿನಚರಿ ಆರಂಭ ವಾಗುವುದೇ ಬೆಳ್ಳಂಬೆಳಗ್ಗೆ 6 ಗಂಟೆಗೆ. ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದ ಬಳಕ ಯೋಗ, ಪ್ರಾಣಾಯಾಮ,ಬೆಳಗ್ಗಿನ ವಾಂಕಿಂಗ್.

ಬೆಳಗ್ಗೆ  9 ಗಂಟೆಗೆ ಸರಿಯಾಗಿ ರಾಗಿ ಗಂಜಿ ಸೇವಿಸುತ್ತಾರೆ. 11 ಗಂಟೆಗೆ ಹಸಿ ತರಕಾರಿಯೇ ಸಿದ್ದರಾಮಯ್ಯ ಅವರಿಗೆ ಮಧ್ಯಾಹ್ನದ ಊಟ. ಹಸಿ ತರಕಾರಿ, ಮೊಳಕೆ ಬಂದ ಕಾಳು, ಸೌತೆಕಾಯಿ, ಕ್ಯಾರೆಟ್, ಬೀಟ್ ರೂಟ್ ನ ಸಲಾಡ್ ಮತ್ತು ಮಜ್ಜಿಗೆ ಮಾತ್ರ.

ಸಂಜೆ ಸರಿಸುಮಾರು 6.30ಕ್ಕೆ ರಾತ್ರಿ ಊಟಕ್ಕೆ ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಅಷ್ಟನ್ನೇ ಸಿದ್ದು ಅವರಿಗೆ ಸೇವಿಸಲು ಅವಕಾಶ. ಇದರ ನಡುವೆ, ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಮಸಾಜ್ ಇರುತ್ತದೆ. ಈ ಚಿಕಿತ್ಸೆಯ ಸಂದರ್ಭದಲ್ಲಿ ಶಾಂತಿಧಾಮದಿಂದ ಹೊರಹೋಗುವಂತಿಲ್ಲ. ರಾತ್ರಿ ಹತ್ತು ಗಂಟೆಗೆ ನಿದ್ದೆಸದಾ ನೂರಾರು ಬೆಂಬಲಿಗರ ನಡುವೆ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪೂರ್ಣ ರಿಲ್ಯಾಕ್ಸ್ ಮೂಡಲಿದ್ದಾರೆ.

 

 

Be the first to comment

Leave a Reply

Your email address will not be published.


*