ತಾಜಾ ಸುದ್ದಿ

ಪ್ರಧಾನಿ ಎದುರು ಬಿಎಸ್‍ವೈ ರಾಜಾ ಇಲಿ: ಎಚ್‍ಡಿಕೆ ವ್ಯಂಗ್ಯ – ಎನ್.ಎಂ.ಸಿ ನ್ಯೂಸ್

ಹಾಸನ: ‘ಮಾಧ್ಯಮಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನ ರಾಜಾಹುಲಿ ಎಂದು ಬಿಂಬಿಸುತ್ತಿವೆ. ಆದರೆ, ಪ್ರಧಾನಿ ಮುಂದೆ ರಾಜಾ ಇಲಿ ಆಗಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಪ್ರಧಾನಿ ಭೇಟಿಗೆ ತೆರಳಿದ ಯಡಿಯೂರಪ್ಪಗೆ ಅವಕಾಶ ನೀಡದೆ ವಾಪಸ್ ಕಳುಹಿಸಲಾಗಿದೆ. ಪ್ರಧಾನಿ […]

ತಾಜಾ ಸುದ್ದಿ

ಯೇಸು ಮುಖಕ್ಕೆ ಡಿಕೆಶಿ ಚಿತ್ರ; ಇದು ಟ್ರೋಲ್ ವಿಕೃತಿ -ಎನ್.ಎಂ.ಸಿ ನ್ಯೂಸ್

ರಾಮನಗರ: ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಸಹಾಯ ಮಾಡಿದ ಶಾಸಕ ಡಿ.ಕೆ. ಶಿವಕುಮಾರ್ ವಿರುದ್ಧ ಅಂತರ್ಜಾಲದಲ್ಲಿ ಟ್ರೋಲ್ ಹೆಚ್ಚಾಗಿವೆ. ಅದರಲ್ಲೂ ಕೆಲವರು ಯೇಸು ಭಾವಚಿತ್ರಕ್ಕೆ ಡಿಕೆಶಿ ಮುಖ ಹಾಕಿ ವಿಕೃತಿ ತೋರಿದ್ದಾರೆ. ಯೇಸು ಪ್ರತಿಮೆ ನಿರ್ಮಾಣ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. […]

ಉಡುಪಿ

ಉಡುಪಿ ಜಿಲ್ಲಾ ತೆನೆ ವಕ್ತಾರ ಪ್ರದೀಪ್ ಆತ್ಮಹತ್ಯೆ – ಎನ್.ಎಂ.ಸಿ ನ್ಯೂಸ್

ಉಡುಪಿ: ಜೆಡಿಎಸ್ ಪಕ್ಷದ ಉಡುಪಿ ಜಿಲ್ಲಾ ವಕ್ತಾರ ಪ್ರದೀಪ್ ಜಿ.(37) 76 ಬಡಗುಬೆಟ್ಟುವಿನ ಬೈಲೂರುನಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆರ್ಥಿಕ ಸಮಸ್ಯೆಯಿಂದ ಜ.2ರ ಸಂಜೆಯಿಂದ ಜ.3ರ ಬೆಳಗ್ಗೆ 10ಗಂಟೆಯ ಮಧ್ಯಾವಧಿಯಲ್ಲಿ ಇವರು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ […]

ತಾಜಾ ಸುದ್ದಿ

‘ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇವೆ, ಪ್ರತಿಭಟನೆ ಹಿಂಪಡೆಯಿರಿ’: ಆಶಾ ಕಾರ್ಯಕರ್ತೆಯರಲ್ಲಿ ಸಚಿವ ಶ್ರೀರಾಮುಲು ಮನವಿ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ತಮ್ಮ ಬೇಡಿಕೆಯನ್ನು ಸರ್ಕಾರ ಹಲವು ಸಮಯಗಳಿಂದ ಈಡೇರಿಸಿಲ್ಲ ಎಂದು ಆಕ್ಷೇಪಿಸಿ ಆಶಾ ಕಾರ್ಯಕರ್ತೆಯರು ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿರುವುದು ತೀವ್ರ ಸ್ವರೂಪ ಪಡೆಯುತ್ತಿರುವಾಗ ನಿಮ್ಮ ಬೇಡಿಕೆಗಳನ್ನು ಸರ್ಕಾರದ ಮಿತಿಯಲ್ಲಿ ಈಡೇರಿಸುತ್ತೇವೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ. ದೆಹಲಿಯಲ್ಲಿರುವ ಆರೋಗ್ಯ ಸಚಿವ […]

ತಾಜಾ ಸುದ್ದಿ

ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಗುರುವಾರ ನಗರದ ಮೂಲಕ ಪ್ರವಾಸ ಆರಂಭಿಸಲಿದ್ದಾರೆ. ವಿಶೇಷ ವಿಮಾನದ ಮೂಲಕ ಯಲಹಂಕ ವಾಯುಪಡೆಯ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ತೆರಳಲಿದ್ದು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಾದ ಪಡೆದು, ರೈತರ ಸಮಾವೇಶದಲ್ಲಿ […]

ತಾಜಾ ಸುದ್ದಿ

ಏಸು ವಿವಾದ ಮುಂದುವರೆಸಬೇಡಿ: ಸಚಿವರಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಕನಕಪುರ ಕಪಾಲ ಬೆಟ್ಟದಲ್ಲಿ 114 ಅಡಿಯ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ವಿಚಾರದಲ್ಲಿ ಮಾಜಿ ಸಚಿವ ಡಿಕೆ. ಶಿವಕುಮಾರ್ ಅವರನ್ನು ಗುರಿಯಾಗಿರಿಸಿಕೊಂಡು ರಾಜಕೀಯ ಟೀಕೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿಯಡಿಯೂರಪ್ಪ ಅವರು ತಮ್ಮ ಸಂಪುಟದ ಸಚಿವರಿಗೆ ಸಲಹೆ ನೀಡಿದ್ದಾರೆ. ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಅವರು, […]

ತಾಜಾ ಸುದ್ದಿ

ಹೊಸ ವರ್ಷದಲ್ಲಿ ಕೆಪಿಸಿಸಿಗೆ ನೂತನ ಸಾರಥಿ; ಚರ್ಚೆ ಆರಂಭ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ಹೊಸ ವರ್ಷದ ಆರಂಭ ದಲ್ಲೇ ನೇಮಕ ಮಾಡಲು ಪಕ್ಷದ ಹೈಕಮಾಂಡ್ ಮುಂದಾಗಿದ್ದು, ರಾಜ್ಯ ನಾಯಕರ ಜತೆಗೆ ಮಾತುಕತೆ ನಡೆಸುತ್ತಿದೆ. ಶಾಸಕ ಜಿ.ಪರಮೇಶ್ವರ ಅವರಿಂದ ಕೆಲ ಮಾಹಿತಿಗಳನ್ನು ವರಿಷ್ಠರು ಪಡೆದು ಕೊಂಡಿದ್ದಾರೆ. ಇನ್ನೂ ಒಂದೆರಡು ದಿನಗಳಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾಗಲಿದ್ದಾರೆ. […]

ತಾಜಾ ಸುದ್ದಿ

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ :ಡಿಸಿಎಂ ಸ್ಥಾನಕ್ಕೆ ಶ್ರೀರಾಮಲು ಪಟ್ಟು – ಎನ್.ಎಂ.ಸಿ ನ್ಯೂಸ್

ರಾಯಚೂರು : ನನಗೆ ಡಿಸಿಎಂ ಹುದ್ದೆ ನೀಡಬೇಕು ಎನ್ನುವುದು ಜನರ ಅಭಿಪ್ರಾಯವಾಗಿದೆ. ಹೀಗಾಗಿ ಅದನ್ನು ನಾನು ತಿರಸ್ಕಾರ ಮಾಡುವಂತಿಲ್ಲ. ಮಾತ್ರವಲ್ಲದೆ ಜನರ ಆಗ್ರಹದಂತೆ ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ, ನಾನು ಸೇರಿದಂತೆ ಸಮುದಾಯದ ಎಲ್ಲ ಶಾಸಕರು ರಾಜೀನಾಮೆ ನೀಡಲು ಸಿದ್ದವಿರುವುದಾಗಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ರಾಯಚೂರಿನ […]

ತಾಜಾ ಸುದ್ದಿ

ಪಿ.ಎಫ್.ಐ ,ಎಸ್.ಡಿ.ಪಿ.ಐ ಕಾಂಗ್ರೆಸ್ ಜೊತೆ ಒಳ ಒಪ್ಪಂದ : ಸಿ.ಟಿ ರವಿ ಆರೋಪ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ನಡೆದುಕೊಳ್ಳಬೇಕು. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದವರ ಆಸ್ತಿಯನ್ನು ಜಪ್ತಿ ಮಾಡಬೇಕು ಎಂದು ಸಚಿವ ಸಿ.ಟಿ ರವಿ ಹೇಳಿದರು. ಮಂಗಳೂರು ಗಲಭೆಯಲ್ಲಿ ಆಸ್ತಿಪಾಸ್ತಿ ನಷ್ಟ ಹಿನ್ನಲೆಯ ವಿಚಾರವಾಗಿ ಅವರು ಗುರುವಾರದಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಿಡಿಗೇಡಿಗಳ ಮೇಲೆ ಕಂದಾಯ ಹೇರಬೇಕು. ಈ […]

ತಾಜಾ ಸುದ್ದಿ

ಅಶಾಂತಿ ಹಾಗೂ ಗಲಭೆ ಸೃಷ್ಟಿಸುವ ಮುಸಲ್ಮಾನರು ಪಿ.ಎಫ್. ಐ ಹಾಗೂ ಕೆ.ಎಫ್.ಡಿ‌ ಸಂಘಟನೆಯಲ್ಲಿರುವವರು : ಸಂಸದೆ ಶೋಭಾ ಕರಂದ್ಲಾಜೆ – ಎನ್.ಎಂ.ಸಿ ನ್ಯೂಸ್

ಮಂಗಳೂರು : ಮಂಗಳೂರಿನಲ್ಲಿ ನಡೆದ ಗಲಭೆಗೆ ಸಿದ್ಧರಾಮಯ್ಯ ರಾಜಕೀಯ ದುರುದ್ದೇಶ ಇಟ್ಟುಕೊಂಡು ಬಂದಿದ್ದಾರೆ.ಪ್ರಶಾಂತ್ ಪೂಜಾರಿ,ಶರತ್ ಮಡಿವಾಳ ಹತ್ಯೆ ಸಂದರ್ಭದಲ್ಲೂ ಸಿದ್ಧರಾಮಯ್ಯ ರಾಜಕೀಯ ಮಾಡಲು ಬಂದಿದ್ದರೂ ಆದರೆ ಇವರ ರಾಜಕೀಯ ಬೆಳೆ ಇಲ್ಲಿ ಬೇಯಲಿಲ್ಲ. ಇನ್ನು ಮಂಗಳೂರಿನಲ್ಲಿ ಶಾಂತಿ ಬಯಸುವ ಯಾರೊಬ್ಬ ಮುಸಲ್ಮಾನರು ಕೆ.ಎಫ್.ಡಿ , ಪಿ.ಎಫ್.ಐ ಸಂಘಟನೆಯಲ್ಲಿ ಇಲ್ಲ.ದೇಶದಲ್ಲಿ […]